ಕರ್ನಾಟಕ

karnataka

ETV Bharat / state

ಆಸ್ತಿ ಕಲಹ ರಾಜೀ ಮಾಡಿಸಲು ಕರೆಸಿ ಹಲ್ಲೆ ಆರೋಪ - RAAJI_HALLE_AV

ಆಸ್ತಿ ಕಲಹ ಕುರಿತು ರಾಜೀ ಸಂದಾನ ಮಾಡಲು ಬಂದಂತಹ ವ್ಯಕ್ತಿಗೆ ಪೊಲೀಸರು ಹೊಡೆದಿದ್ದಾರೆ ಎಂಬ ಆರೋಪ ಚಿತ್ರದುರ್ಗ ಪೊಲೀಸರು ಮೇಲೆ ಕೇಳಿ ಬಂದಿದೆ.

ಹಲ್ಲೆಗೊಳಗಾದ ವ್ಯಕ್ತಿಯ ಚಿತ್ರ

By

Published : Mar 10, 2019, 2:57 PM IST

Updated : Mar 10, 2019, 3:15 PM IST

ಚಿತ್ರದುರ್ಗ: ಆಸ್ತಿ ಕಲಹದ ಸಮಸ್ಯೆಯನ್ನು ಬಗೆಹರಿಸಿ ರಾಜೀ ಮಾಡಿಸಲು ವ್ಯಕ್ತಿಯೊರ್ವನನ್ನು ಕರೆಸಿ ಹಲ್ಲೆ ಮಾಡಿರುವ ಆರೋಪ ಚಳ್ಳಕೆರೆ ಪೊಲೀಸರ ವಿರುದ್ಧ ಕೇಳಿ ಬಂದಿದೆ.

ಹಲ್ಲೆಗೊಳಗಾದ ವ್ಯಕ್ತಿಯ ವಿಡಿಯೋ

ಜಿಲ್ಲೆಯ ಚಳ್ಳಕೆರೆ ಠಾಣೆ ಪಿಎಸ್ಐ ಸತೀಶ್ ನಾಯ್ಕ್ ಮತ್ತು ಪೇದೆ ವಿರುದ್ಧ ಈ ಆರೋಪ ಮಾಡಲಾಗಿದೆ. ಇದೇ ಚಳ್ಳಕೆರೆಯ ಮದಕರಿ ನಗರದ ನಿವಾಸಿ ದಿವಾಕರ ನಾಯಕ್ ಪೊಲೀಸರ ಮೇಲೆ ಆರೋಪ ಮಾಡಿದ್ದು, ವಿಚ್ಚೇದಿತೆಯಾದ ಅಕ್ಕನಿಗೆ ಕೊಟ್ಟಿರುವ ಮನೆಯನ್ನು ಕಬಳಿಸಲು ಯತ್ನಿಸುತ್ತಿರುವವರ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಅಳನ್ನು ತೋಡಿಕೊಂಡರು.

ಅಣ್ಣಂದಿರಾದ ಮಂಜುನಾಥ್, ಶ್ರೀನಿವಾಸ್, ಅತ್ತಿಗೆಯರಾದ ಈರಮ್ಮ, ಮಂಜುಳಾ ಮತ್ತು ತಿಪ್ಪೇಶ್ ವಿರುದ್ಧ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಹಲ್ಲೆಗೊಳಗಾದ ದಿವಾಕರ್ ಆರೋಪ ಮಾಡಿದ್ದಾರೆ. ಹಲ್ಲೆಗೊಳಗಾದ ದಿವಾಕರ್ ನಾಯಕ್​​ರನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Mar 10, 2019, 3:15 PM IST

For All Latest Updates

ABOUT THE AUTHOR

...view details