ಚಿತ್ರದುರ್ಗ: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಚಲಿಸುತ್ತಿದ್ದ ಓಮಿನಿ ಕಾರು ಸುಟ್ಟು ಕರಕಲಾಗಿದ ಘಟನೆ ಇಲ್ಲಿನ ಹೊಸೂರು ಗ್ರಾಮದ ಬಳಿ ತಡ ರಾತ್ರಿ ನಡೆದಿದೆ.
ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಓಮಿನಿ ಕಾರು: ತಪ್ಪಿದ ಭಾರಿ ಅನಾಹುತ - ಆಕಸ್ಮಿಕ ಬೆಂಕಿ
ಚಳ್ಳಕೆರೆ ತಾಲೂಕಿನ ಹೊಸೂರು ಗ್ರಾಮದ ಕಡೆಗೆ ಚಲಿಸುವ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ.
![ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಓಮಿನಿ ಕಾರು: ತಪ್ಪಿದ ಭಾರಿ ಅನಾಹುತ accidental fire](https://etvbharatimages.akamaized.net/etvbharat/prod-images/768-512-9669332-1089-9669332-1606370100690.jpg)
ಆಕಸ್ಮಿಕ ಬೆಂಕಿ
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಸೂರು ಗ್ರಾಮದ ಕಡೆಗೆ ಚಲಿಸುವ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ.
ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಓಮಿನಿ ಕಾರ್
ಇದನ್ನು ಓದಿ.. ಯಾರೇ ಸತ್ರೂ ಒಂದೇ ಸಮಾಧಿಯಲ್ಲಿ ಸಂಸ್ಕಾರ...ಇಲ್ಲೊಂದು ವಿಚಿತ್ರ ಆಚಾರ
ಬೆಂಕಿಯ ಕೆನ್ನಾಲಿಗೆಗೆ ಇಡೀ ಕಾರು ಸುಟ್ಟು ಕರಕಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.