ಚಿತ್ರದುರ್ಗ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಚಳ್ಳಕೆರೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯನ್ನು (ಇಒ) ವಶಕ್ಕೆ ಪಡೆದುಕೊಂಡಿದ್ದಾರೆ.
ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಚಳ್ಳಕೆರೆ ಇಒ ಶ್ರೀಧರ್ - executive officer
ಪಿಡಿಒ ಬಳಿಯಿಂದ ಕಾರ್ಯನಿರ್ವಾಹಕ ಅಧಿಕಾರಿಯೋರ್ವರು 20 ಸಾವಿರ ರೂ. ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲಂಚ ಸಮೇತ ಇಒ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
![ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಚಳ್ಳಕೆರೆ ಇಒ ಶ್ರೀಧರ್ ಚಳ್ಳಕೆರೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ](https://etvbharatimages.akamaized.net/etvbharat/prod-images/768-512-10987554-thumbnail-3x2-lek.jpg)
ಚಳ್ಳಕೆರೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ
ಚಳ್ಳಕೆರೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ
ಬೆಳಗೆರೆ ಪಿಡಿಒ ಗುಂಡಪ್ಪ ಎಂಬುವರಿಂದ ಚಳ್ಳಕೆರೆ ತಾಲೂಕು ಇಒ ಶ್ರೀಧರ್ ಎಂಬುವರು ಬರ್ಕಿ ಕಚೇರಿ ಕೆಲಸದ ವಿಚಾರವಾಗಿ 20 ಸಾವಿರ ರೂ. ಲಂಚ ಪಡೆದುಕೊಳ್ಳುತ್ತಿದ್ದರು. ಪಿಡಿಒ ನೀಡಿದ ದೂರಿನನ್ವಯ ಚಿತ್ರದುರ್ಗ ಎಸಿಬಿ ಡಿಎಸ್‌ಪಿ ಬಸವರಾಜ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಭ್ರಷ್ಟಾಚಾರ ಆರೋಪದ ಮೇಲೆ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಶ್ರೀಧರ್ ಮನೆ ಮೇಲೆ ಸಹ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ವೇಳೆ 6.20 ಲಕ್ಷ ರೂ., ಅಧಿಕಾರಿಯ ಬ್ಯಾಂಕ್ ಅಕೌಂಟ್‌ನಲ್ಲಿದ್ದ 3 ಲಕ್ಷ ಹಾಗೂ ಕೆಲವು ಆಸ್ತಿ ಕಾಗದ ಪತ್ರಗಳ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Last Updated : Mar 13, 2021, 9:54 AM IST