ಚಿತ್ರದುರ್ಗ: ಕೊರೊನಾ ಸೊಂಕು ಹರಡದಂತೆ ಭಾರತದಲ್ಲಿ ವಿಧಿಸಿರುವ ಲಾಕ್ಡೌನ್ನಲ್ಲಿ ಬಾರ್ಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಬೇಸತ್ತ ಕುಡುಕರು ಬಾರ್ಗಳಿಗೆ ಕನ್ನ ಹಾಕುತ್ತಿದ್ದಾರೆ. ಇಂತಹದ್ದೊಂದು ಪ್ರಕರಣ ಚಿತ್ರದುರ್ಗದಲ್ಲೂ ಬೆಳಕಿಗೆ ಬಂದಿದೆ.
ಲಾಕ್ಡೌನ್ ನಡುವೆ ಎಣ್ಣೆಗಾಗಿ ಬಾರ್ಗೆ ಕನ್ನ ಹಾಕಿದ ಕುಡುಕರು - The drunkards who barged into the bar
ಲಾಕ್ಡೌನ್ ಹಿನ್ನೆಲೆಯಲ್ಲಿ ಬಾರ್ಗಳು ಬಂದ್ ಆದ ಪರಿಣಾಮ ಬೇಸತ್ತ ಕುಡುಕರು ಬಾರ್ ಬೀಗ ಮುರಿದು ಮದ್ಯ ಕದ್ದೊಯ್ದಿದ್ದಾರೆ.

ಬಾರ್ಗೆ ಕನ್ನ ಹಾಕಿದ ಕುಡುಕರು
ನಗರದ ಕೆಎಸ್ಆರ್ಟಿಸಿ ಬಸ್ ಮುಂಭಾಗದ ನರ್ತಕಿ ಬಾರ್ನ ಬೀಗ ಮುರಿದು 20 ಸಾವಿರ ಬೆಲೆಬಾಳುವ ಮದ್ಯ ಹಾಗೂ 8 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.