ಕರ್ನಾಟಕ

karnataka

ETV Bharat / state

ನೆರೆ ಪರಿಹಾರ ಕುರಿತು ತಪ್ಪು ಮಾಹಿತಿ ನೀಡಬೇಡಿ: ಸಂಸದ ಎ. ನಾರಾಯಣ ಸ್ವಾಮಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಾತನಾಡಿದ ಸಂಸದ ಎ.ನಾರಾಯಣಸ್ವಾಮಿ ಅವರು ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ನೆರೆ ಪರಿಹಾರ ಕುರಿತು ತಪ್ಪು ಮಾಹಿತಿ ನೀಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರು.

ಸಂಸದ ಎ. ನಾರಾಯಣ ಸ್ವಾಮಿ

By

Published : Oct 4, 2019, 5:10 PM IST

ಚಿತ್ರದುರ್ಗ:ಮಾಧ್ಯಮಗಳಲ್ಲಿ ನೆರೆ ಪರಿಹಾರ ಕುರಿತು ತಪ್ಪು ಮಾಹಿತಿ ನೀಡಬೇಡಿ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಮಹಾರಾಷ್ಟ್ರದಲ್ಲಿ ಪದೇ ಪದೇ ಮಳೆಯಾಗ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರದಿಂದ ಪಡೆಯುತ್ತಿದ್ದು, ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.

ನೆರೆ ಪರಿಹಾರ ಕುರಿತು ತಪ್ಪು ಮಾಹಿತಿ ನೀಡಬೇಡಿ- ಎ.ನಾರಾಯಣಸ್ವಾಮಿ

ಖಜಾನೆಯಲ್ಲಿನ ಹಣ, ವಿವಿಧ ಇಲಾಖೆಗಳಲ್ಲಿ ಖರ್ಚಾಗದೇ ಉಳಿದ ಹಣ ಬಳಸಿಕೊಂಡು ಪರಿಹಾರ ನೀಡಲು ಮುಂದಾಗಬೇಕಿದೆ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇರತೆ ಇಲಾಖೆ ಹಣ ಬಳಸಿಕೊಳ್ಳಲು ಫೈನಾನ್ಸ್​ ಇಲಾಖೆ ಅನುಮತಿ ಕೋರಲಾಗಿದ್ದು, ರಾಜ್ಯಕ್ಕೆ ಪರಿಹಾರ ಕಲ್ಪಿಸೋದು ಕೇಂದ್ರಕ್ಕೆ ದೊಡ್ಡ ವಿಚಾರವಲ್ಲ ಎಂದರು.

ಇನ್ನೂ ಶಾಶ್ವತ ಪರಿಹಾರ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸೋದಕ್ಕೋಸ್ಕರ ತಡವಾಗ್ತಿದೆ. ಬದಲಾಗಿ ತಾತ್ಕಾಲಿಕ ಪರಿಹಾರ ಕಲ್ಪಿಸೋದು ಕೇಂದ್ರಕ್ಕೆ ಸಮಸ್ಯೆ ಅಲ್ಲ. ಅಧಿಕಾರಿಗಳು ಮಾಡೋದು ಒಂದು, ನೈಜ ಸ್ಥಿತಿ ಇರೋದು ಇನ್ನೊಂದು ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details