ಚಿತ್ರದುರ್ಗ:ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೆ.ಡಿ. ಕೋಟೆ ಗ್ರಾಮದ ಬಳಿಯ ಪಾಳು ಬಾವಿಯೊಂದಕ್ಕೆ ಬಿದ್ದಿದ್ದ ಕರಡಿ ಹಾಗೂ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಪಾಳು ಬಾವಿಗೆ ಬಿದ್ದ ಕರಡಿ, ಹೆಬ್ಬಾವು.. ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ - Forest Department left to the forest
ಪಾಳು ಬಾವಿಗೆ ಬಿದ್ದಿದ್ದ ಕರಡಿ ಮತ್ತು ಹೆಬ್ಬಾವನ್ನು ರಕ್ಷಿಸಲಾಗಿದೆ. ಜನರ ಮಧ್ಯೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗೆ ಮತ್ತಿನ ಔಷಧಿ ನೀಡಿ ಜ್ಞಾನ ತಪ್ಪಿಸಿ ಸೆರೆ ಹಿಡಿದರು. ಎರಡನ್ನೂ ರಕ್ಷಿಸಿ ಅಧಿಕಾರಿಗಳು ಅರಣ್ಯಕ್ಕೆ ಬಿಟ್ಟಿದ್ದಾರೆ.
ಕರಡಿ ಹಾಗೂ ಹೆಬ್ಬಾವು
ಕಳೆದ ದಿನ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯ ಮಾಡಿದ್ದಾರೆ. ಬಾವಿಯಲ್ಲಿ ಬಿದ್ದಿದ್ದ ಹಾವು ಹಾಗೂ ಕರಡಿಯನ್ನು ನೋಡಲು ಸಾಕಷ್ಟು ಜನ ಜಮಾಯಿಸಿದ್ದರು. ಇದು ಸಿಬ್ಬಂದಿಗೆ ತಲೆಬಿಸಿಯಾಗಿ ಪರಿಣಮಿಸಿತ್ತು.
ಜನರ ಮಧ್ಯೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗೆ ಮತ್ತಿನ ಔಷದಿ ನೀಡಿ ಜ್ಞಾನ ತಪ್ಪಿಸಿ ಸೆರೆ ಹಿಡಿದರು. ಬಳಿಕ ಎರಡನ್ನೂ ಅಧಿಕಾರಿಗಳು ಅರಣ್ಯಕ್ಕೆ ಬಿಟ್ಟಿದ್ದಾರೆ.