ಚಿತ್ರದುರ್ಗ: ಇತಿಹಾಸ ಪ್ರಸಿದ್ಧ ಹಿರಿಯೂರಿನ ತೇರು ಮಲ್ಲೇಶ್ವರ ಬ್ರಹ್ಮರಥೋತ್ಸವ ಕೊರೊನಾ ಮಧ್ಯೆ ಸರಳವಾಗಿ ಜರುಗಿದೆ.
ಸರಳವಾಗಿ ಜರುಗಿದ ಹಿರಿಯೂರಿನ ತೇರು ಮಲ್ಲೇಶ್ವರ ಬ್ರಹ್ಮರಥೋತ್ಸವ - ತೇರು ಮಲ್ಲೇಶ್ವರ
ಕೊರೊನಾ ವೈರಸ್ ಭೀತಿಯ ನಡುವೆಯೂ ಚಿತ್ರದುರ್ಗದಲ್ಲಿ ತೇರು ಮಲ್ಲೇಶ್ವರ ಬ್ರಹ್ಮರಥೋತ್ಸವವನ್ನು ಸಾಂಪ್ರದಾಯಿಕವಾಗಿ ನಡೆಸಲಾಯಿತು.

ಹಿರಿಯೂರಿನ ತೇರು ಮಲ್ಲೇಶ್ವರ ಬ್ರಹ್ಮ ರಥೋತ್ಸವ
ರಥಕ್ಕೆ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಹರಕೆ ತೀರಿಸಿದ್ದಾರೆ. ತೇರು ಮಲ್ಲೇಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕುಟುಂಬ ಸಮೇತ ರಥೋತ್ಸವದಲ್ಲಿ ಪಾಲ್ಗೊಂಡರು.
ಹಿರಿಯೂರಿನ ತೇರು ಮಲ್ಲೇಶ್ವರ ಬ್ರಹ್ಮರಥೋತ್ಸವ
ಪ್ರತಿವರ್ಷ ರಥೋತ್ಸವ ಮುನ್ನ ಭಕ್ತಿ ಧ್ವಜ ಹರಾಜು ಹಾಕುವ ಪ್ರತೀತಿ ಅನಾದಿ ಕಾಲದಿಂದಲೂ ಈ ದೇವಾಲಯದಲ್ಲಿ ನಡೆದುಕೊಂಡು ಬಂದಿದೆ. ರಥ ಎಳೆಯುವ ಮುನ್ನ ತೇರಿಗೆ ಕಟ್ಟಲಾದ ಪಟ್ಟಿ ಧ್ವಜ ಹರಾಜು ಬಹಿರಂಗ ಹಾಕುತ್ತಾರೆ. ಧ್ವಜಕ್ಕೆ ಲಕ್ಷಾಂತರ ರೂಪಾಯಿ ನಗದು ಪಾವತಿಸಿ ಭಕ್ತರು ಭಕ್ತಿ ಧ್ವಜಕ್ಕೆ ಹರಕೆ ಕಟ್ಟಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ.