ಚಿತ್ರದುರ್ಗ:ಟಾಟಾ ಏಸ್ ವಾಹನ ಪಲ್ಟಿಯಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ನೂರಮೂರು ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಹಿರಿಯೂರಿನ ವೇದಾವತಿ ನಗರದ ತಮಿಳು ಕಾಲೊನಿಯ ಸೆಲ್ವಿ (35), ದೀಪಿಕಾ (06), ನೀಲಮ್ಮ(29) ಎಂದು ಗುರುತಿಸಲಾಗಿದೆ. ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಹಿರಿಯೂರಿನಿಂದ ಕಾಂಕ್ರಿಟ್ ಕೆಲಸಕ್ಕಾಗಿ ಚಳ್ಳಕೆರೆಗೆ ಕರೆದೊಯ್ಯುವಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟಾಟಾ ಏಸ್ ಪಲ್ಟಿಯಾಗಿದೆ.