ಕರ್ನಾಟಕ

karnataka

ETV Bharat / state

ಅಪ್ಪು ಪುಣ್ಯಸ್ಮರಣೆ: 3 ಗಂಟೆಗಳಲ್ಲಿ 100 ಗಿಡ ನೆಟ್ಟು ಗೌರವ ಸೂಚಿಸಿದ ಅಭಿಮಾನಿಗಳು

ಚಿತ್ರದುರ್ಗ ನಗರದ ಟಾರ್ಗೆಟ್ 10 ತೌಸಂಡ್​ ತಂಡದ ಯುವಕರು ಸದ್ಗುರು ಸೇವಾ ಆಶ್ರಮದಲ್ಲಿ ಮೂರು ಗಂಟೆಗಳಲ್ಲಿ ನೂರು ಗಿಡಗಳನ್ನು ನೆಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ಗೆ ಗೌರವ ಸೂಚಿಸಿದರು.

Target 10 Thousand team youth planting 100 trees
Target 10 Thousand team youth planting 100 trees

By

Published : Nov 2, 2021, 9:35 AM IST

ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಮ್ಮನ್ನು ಅಗಲಿದರೂ ಕೂಡ ಕೋಟ್ಯಂತರ ಮನಸ್ಸುಗಳಲ್ಲಿ ಉಳಿದಿದ್ದಾರೆ. ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಟಾರ್ಗೆಟ್ 10 ತೌಸಂಡ್ ತಂಡದ ಯುವಕರು ಸದ್ಗುರು ಸೇವಾ ಆಶ್ರಮದಲ್ಲಿ ಮೂರು ಗಂಟೆಗಳಲ್ಲಿ ನೂರು ಗಿಡಗಳನ್ನು ನೆಡುವ ಮೂಲಕ ನಟನಿಗೆ ಗೌರವ ಸೂಚಿಸಿದರು.

ಈ ವೇಳೆ ಮಾತನಾಡಿದ ತಂಡದ ಮುಖಂಡ ಸಿದ್ದರಾಜು ಜೋಗಿ, ನಾವು ಪ್ರತಿ ವಾರ ಗಿಡ ನೆಡುವ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಆದರೆ ಇಂದು ವಿಶೇಷವಾಗಿ ಪುನೀತ್ ಅವರಿಗಾಗಿ ಈ ಗಿಡಗಳನ್ನು ನೆಡಲಾಗಿದೆ. ಕುಟಂಬದ ಜೊತೆಗೆ ಸಮಾಜವನ್ನು ಸಹ ತಮ್ಮ ಕುಟುಂಬವೆಂದು ಭಾವಿಸಿ ಪುನೀತ್ ಬದುಕಿದ್ದರು. ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದು ದುಃಖ ತರಿಸುತ್ತದೆ. ಸಮಾಜದ ಪ್ರತಿಯೊಬ್ಬರು ಅವರಲ್ಲಿನ ಒಂದೊಂದು ಗುಣವನ್ನು ಅಳವಡಿಸಿಕೊಂಡು ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡಬೇಕು ಎಂದು ಕರೆ ನೀಡಿದರು.

ಗಿಡ ನೆಡುವ ಮೂಲಕ ಪುನೀತ್​ಗೆ ಗೌರವ ಸೂಚಿಸಿದ ಅಭಿಮಾನಿಗಳು

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಯುವಕರು ಪುನೀತ್​ ಪ್ಲೆಕ್ಸ್​ಗೆ ಪುಪ್ಪಮಾಲೆ ಹಾಕುವ ಮೂಲಕ ಅಪ್ಪು ಪುಣ್ಯಸ್ಮರಣೆ ಮಾಡಿದರು.

ಪುನೀತ್​ ಪ್ಲೆಕ್ಸ್​ಗೆ ಪುಪ್ಪಮಾಲೆ ಹಾಕಿದ ಭೀಮಸಮುದ್ರ ಗ್ರಾಮಸ್ಥರು

ABOUT THE AUTHOR

...view details