ಚಿತ್ರದುರ್ಗ:ಲಾಕ್ಡೌನ್ ಘೋಷಣೆಯಾದ ಬಳಿಕ ಬಡ ಜನರ ಸಮಸ್ಯೆಯನ್ನರಿತ ಸರ್ಕಾರ, ಉಚಿತವಾಗಿ ಹಾಲು ವಿತರಿಸುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವೆಂಕಟೇಶಯ್ಯ ಮನೆ ಮನೆಗೆ ತೆರಳಿ ಹಾಲು ವಿತರಿಸಿದರು.
ಮನೆ ಮನೆಗೆ ತೆರಳಿ ಹಾಲು ವಿತರಿಸಿದ ತಹಶೀಲ್ದಾರ್ - chitradurga news
ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹಾಲು ವಿತರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಲು ಹಂಚಿದರು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಹಾಲು ಸ್ವೀಕರಿಸಿದರು.
ಚಿತ್ರದುರ್ಗ ತಹಶೀಲ್ದಾರ್
ಇದೇ ವೇಳೆ ಅವರು ಮನೆಯಿಂದ ಯಾರೂ ಕೂಡಾ ಹೊರ ಬಾರದಂತೆ ನಿವಾಸಿಗಳಲ್ಲಿ ಮನವಿ ಮಾಡಿದರು.