ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಬಳಿ ಇರುವ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ವಿವಿ ಸಾಗರದಿಂದ ವೇದಾವತಿ ನದಿಗೆ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಸರ್ಕಾರದ ಆದೇಶಾನುಸಾರ ನೀರು ಹರಿಯಲಿದೆ. ಹಿರಿಯೂರಿನಲ್ಲಿ ಡ್ಯಾಮ್ ಇದೆ ಎಂದರೆ ಅದು ಹಿರಿಯೂರಿಗೆ ಮಾತ್ರ ಸೀಮಿತ ಅಲ್ಲ. ಬದಲಾಗಿ ಎಲ್ಲ ರೈತರಿಗೆ ಸೇರಿದ್ದು, ಅದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ವಿವಿ ಸಾಗರಕ್ಕೆ ನುಗ್ಗಿ ವೇದಾವತಿ ನದಿಗೆ ಹರಿಯುವ ನೀರು ನಿಲ್ಲಿಸಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀ ನಿವಾಸ್ ಅವರಿಗೆ ಟಾಂಗ್ ನೀಡಿದರು.
ತಬ್ಲಿಘಿಗಳು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಲಿದ್ದಾರೆ: ಜಾರಕಿಹೊಳಿ - Ramesh Jarkiholi reaction
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚು ಹರಡಲು ತಬ್ಲಿಘಿಗಳೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಯಾರು ಬೇಕಂತಲೇ ಇದನ್ನು ಹರಡಿರುತ್ತಾರೋ ಅಂತವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಲಿದ್ದಾರೆ ಎಂದಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ
ಇನ್ನು ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿಗೆ ಮಾಡಲು ಕೆಲಸ ಇಲ್ಲ ಎಂದು ಕುಟುಕಿದರು.