ಚಿತ್ರದುರ್ಗ: ಅಕ್ರಮ ಒತ್ತುವರಿ ಮಾಡಿದ್ದನ್ನು ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಶಾಸಕರ ಮುಂದೇನೆ ಅವರ ಬೆಂಬಲಿಗ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ರಾಮಗಿರಿಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೋವೀಗ ಸಾಮಾಜಿಕ ಜಾಲ ತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಅಕ್ರಮ ಒತ್ತುವರಿ ಪ್ರಶ್ನಿಸಿದವರ ಮೇಲೆ ಶಾಸಕರ ಬೆಂಬಲಿಗನಿಂದ ಹಲ್ಲೆ.. - ಬಿಜೆಪಿ ಶಾಸಕ ಚಂದ್ರಪ್ಪ ಬೆಂಬಲಿಗ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ರಾಮಗಿರಿಯಲ್ಲಿ ಅಕ್ರಮ ಒತ್ತುವರಿ ಮಾಡಿದ್ದನ್ನು ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಶಾಸಕರ ಮುಂದೇನೆ ಅವರ ಬೆಂಬಲಿಗ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬಿಜೆಪಿ ಶಾಸಕ ಚಂದ್ರಪ್ಪ ಬೆಂಬಲಿಗ ಹಲ್ಲೆ ಮಾಡಿದ್ದಾನೆ. ದೇವಸ್ಥಾನದ ಜಾಗವನ್ನು ಹೊಳಲ್ಕೆರೆ ಶಾಸಕ ಚಂದ್ರಪ್ಪ ಬೆಂಬಲಿಗ ಒತ್ತುವರಿ ಮಾಡಿಕೊಂಡಿದ್ದರು. ಜನಸ್ಪಂದನ ವೇದಿಕೆಯಲ್ಲಿ ಇದರ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಚಂದ್ರಪ್ಪ ಬೆಂಬಲಿಗರು ಜಿ.ರಾಮಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ.
ಇದೇ ಗ್ರಾಮದಲ್ಲಿರುವ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಮಗಿರಿ ಶ್ರೀಸಿದ್ದೇಶ್ವರಸ್ವಾಮಿ ದೇಗುಲಕ್ಕೆ ಸೇರಿರುವ 12 ಗುಂಟೆ ಜಾಗದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನಸ್ಪಂದನ ಸಭೆಯಲ್ಲಿ ಸಿಇಒ ಸತ್ಯಭಾಮ, ಶಾಸಕ ಚಂದ್ರಪ್ಪಗೆ ಗ್ರಾಮಸ್ಥರು ದೂರು ನೀಡಿದ್ದರು. ಇದಕ್ಕೆ ಆಕ್ರೋಶಗೊಂಡ ಬೆಂಬಲಿಗ ಶಾಸಕರ ಸಮ್ಮುಖದಲ್ಲೇ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದಾನೆ.