ಚಿತ್ರದುರ್ಗ: ಜಿಲ್ಲೆಗೆ ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ ಸಂಸ್ಥೆಯಿಂದ 516.06 ಮೆಟ್ರಿಕ್ ಟನ್ ಹಾಗೂ ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್ ಸಂಸ್ಥೆಯಿಂದ 400 ಮೆಟ್ರಿಕ್ ಟನ್ ಸೇರಿ ಒಟ್ಟು 916 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ.
ಚಿತ್ರದುರ್ಗ: 2 ದಿನದಲ್ಲಿ 916 ಮೆಟ್ರಿಕ್ ಟನ್ ಯೂರಿಯಾ ಪೂರೈಕೆ, ವಿತರಣೆಗೆ ಕ್ರಮ - ರೈತರಿಗೆ ರಸಗೊಬ್ಬರ ವಿತರಣೆ
ಕೋಟೆನಾಡು ಚಿತ್ರದುರ್ಗಕ್ಕೆ ಎರಡು ದಿನಗಳಲ್ಲಿ 916 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಲಿದ್ದು, ಅದನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸದಾಶಿವ ಹೇಳಿದ್ದಾರೆ.
![ಚಿತ್ರದುರ್ಗ: 2 ದಿನದಲ್ಲಿ 916 ಮೆಟ್ರಿಕ್ ಟನ್ ಯೂರಿಯಾ ಪೂರೈಕೆ, ವಿತರಣೆಗೆ ಕ್ರಮ Joint Agriculture director Sadashiva](https://etvbharatimages.akamaized.net/etvbharat/prod-images/768-512-04:42:40:1596712360-kn-ctd-04-06-gobbara-av-7204336-06082020163932-0608f-1596712172-412.jpg)
Joint Agriculture director Sadashiva
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಮಠಾಧೀಶರ ಪ್ರಯತ್ನ ಹಾಗೂ ರಾಜ್ಯ ಕೃಷಿ ಸಚಿವರ ವಿಶೇಷ ಪ್ರಯತ್ನ ಮತ್ತು ಕೇಂದ್ರ ರಸಗೊಬ್ಬರ ಸಚಿವರ ಸಹಕಾರದಿಂದ ಎರಡು ದಿನಗಳಲ್ಲಿ ಯೂರಿಯಾ ಸರಬರಾಜು ಆಗಲಿದೆ. ಅದನ್ನು ಜಿಲ್ಲಾದ್ಯಂತ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸದಾಶಿವ ಅವರು ತಿಳಿಸಿದ್ದಾರೆ.
ರೈತರು ಆತಂಕಕ್ಕೆ ಒಳಗಾಗಬೇಡಿ. ಅಗತ್ಯ ರಸಗೊಬ್ಬರ ದೊರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್-19 ಸೋಂಕು ಹರಡುವ ಕಾರಣ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯೂರಿಯಾ ರಸಗೊಬ್ಬರವನ್ನು ಪಡೆಯಬೇಕು ಎಂದು ಸೂಚಿಸಿದರು.