ಚಿತ್ರದುರ್ಗ: ರಾಜ್ಯದಲ್ಲಿ ಪ್ರಥಮ ಟ್ರ್ಯಾಕ್ಟರ್ ಚಾಲನಾ ಪ್ರಮಾಣಪತ್ರ ಪಡೆದು ಕೃಷಿಯಲ್ಲಿ ಸಾಧನೆ ಮಾಡಿ 2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ರೈತ ಮಹಿಳೆ ಸುಮಂಗಲಮ್ಮ (69) ಹೃದಯಘಾತದಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರೇಷ್ಮೆ ಕೃಷಿ, ತೆಂಗಿನ ಕೃಷಿ, ತೆಂಗಿನಮರದಿಂದ ನಿರಾ ಇಳಿಸುವುದು, ಅಜೋಲಾ ಸೇರಿದಂತೆ ಸುಮಾರು 70 ಎಕರೆ ಪ್ರದೇಶದ ತೋಟದಲ್ಲಿ ವಿವಿಧ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿ ಕೃಷಿ ವಿಶ್ವವಿದ್ಯಾನಿಲಯ ರೀತಿ ಸಿದ್ದಪಡಿಸಿದ್ದರು. ರಾಜ್ಯದ ಹಲವು ಜಿಲ್ಲೆಗಳಿಂದ ಜನರು ವೀಕ್ಷಿಸಲು ಆಗಮಿಸುತ್ತಿದ್ದರು.