ಚಿತ್ರದುರ್ಗ:ಫೋಟೋಸ್ಟುಡಿಯೋ ಮಾಲೀಕರೊಬ್ಬರಭೀಕರ ಕೊಲೆ ಹೊಳಲ್ಕೆರೆ ತಾಲೂಕಿನ ಶಿವಗಂಗ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸವರಾಜ್ (33) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಇವರು ತನ್ನದೇ ಸ್ವಂತ ಸ್ಟುಡಿಯೋ & ವಿಡಿಯೋ ಶಾಪ್ ನಡೆಸುತ್ತಿದ್ದರು.
ಸುಮಾರು 10 ವರ್ಷಗಳಿಂದ ತನ್ನ ಸ್ವಂತ ಗ್ರಾಮ ಶಿವಗಂಗಾದಲ್ಲೇ ವಾಸವಾಗಿದ್ದ ಬಸವರಾಜ್ಗೆ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದು, ಇತ್ತೀಚೆಗಷ್ಟೆ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಇದರಿಂದಾಗಿ ತವರು ಮನೆಗೆ ತೆರಳಿದ್ದು. ಬಸವರಾಜ ಮನೆಯಲ್ಲಿ ಒಬ್ಬರೆ ಇದ್ದದ್ದನ್ನು ಗಮನಿರುವ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.