ಚಿತ್ರದುರ್ಗ: "ಸಾಯುವವರು ಎಲ್ಲಾದರೂ ಸಾಯಲಿ, ನಾನು ಇಲ್ಲಿ ಆಸ್ಪತ್ರೆ ನಿರ್ಮಿಸಲು ಬಿಡುವುದಿಲ್ಲ" ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರಪ್ಪ ಅವರು ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ಫಾಲಾಕ್ಷ ವಿರುದ್ದ ಹರಿಹಾಯ್ದಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ನೋಡಿದ ಸಾರ್ವಜನಿಕರು, ಶಾಸಕರಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, ನಮಗೆ ಜನರ ಬಗ್ಗೆ ಕಾಳಜಿ ಇಲ್ಲ ಅಂತ ಅಲ್ಲ, ಬರಿ ಬೆಡ್ ಹಾಕಿ ಆಸ್ಪತ್ರೆ ನಿರ್ಮಿಸಿದರೆ ಹೇಗೆ? ಆಸ್ಪತ್ರೆ ನಿರ್ಮಿಸಿದರೆ ಅದಕ್ಕೆ ಬೇಕಾದ ವೆಂಟಿಲೇಟರ್, ಆಕ್ಸಿಜನ್, ಔಷಧ ಎಲ್ಲವೂ ಇರಬೇಕು. ಯಾವುದೇ ವ್ಯವಸ್ಥೆಗಳಿಲ್ಲದೆ ನಾವು ಕೋವಿಡ್ ಆಸ್ಪತ್ರೆ ನಿರ್ಮಿಸಿದ್ದೇವೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.