ಚಿತ್ರದುರ್ಗ: ಲಾಕ್ಡೌನ್ನಿಂದಾಗಿ ರೈತರಿಗೆ ಆಗ್ತಿರುವ ಸಮಸ್ಯೆಗಳನ್ನು ಆಲಿಸಲು ನಗರಕ್ಕೆ ಆಗಮಿಸಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರದ ಎಪಿಎಂಸಿ ಮಾರುಕಟ್ಟೆಗೆ ತೆರಳಿ ಪರಿಶೀಲನೆ ನಡೆಸಿ ರೈತರ ಹಾಗೂ ಹಮಾಲಿಗಳ ಸಮಸ್ಯೆ ಆಲಿಸಿದರು.
ಮುರುಘಾ ಮಠಕ್ಕೆ ಸಚಿವ ಸೋಮಶೇಖರ್ ಭೇಟಿ: ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ - chitradurga lock down
ರೈತರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಎಪಿಎಂಸಿ ಮಾರುಕಟ್ಟೆಗೆ ತೆರಳಿ ಪರಿಶೀಲನೆ ನಡೆಸಿ ರೈತರ ಮತ್ತು ಹಮಾಲಿಗಳ ಸಮಸ್ಯೆ ಆಲಿಸಿದರು. ನಂತರ ಮುರುಘಾ ಮಠಕ್ಕೆ ತೆರಳಿ ಬಡ, ನಿರ್ಗತಿಕ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.
![ಮುರುಘಾ ಮಠಕ್ಕೆ ಸಚಿವ ಸೋಮಶೇಖರ್ ಭೇಟಿ: ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ st somashekhar visited to chitradurga murugha math](https://etvbharatimages.akamaized.net/etvbharat/prod-images/768-512-6841123-thumbnail-3x2-stsom.jpg)
ಎಸ್. ಟಿ. ಸೋಮಶೇಖರ್
ನಂತರ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಿರಾಶ್ರಿತ ಕಾರ್ಮಿಕರು, ಬಡವರು ಮತ್ತು ನಿರ್ಗತಿಕರಿಗೆ ಸಚಿವರು ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.
ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಸಹಕಾರ ಸಚಿವ
ಮುರುಘಾ ಮಠದಿಂದ 300 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ಹರಡದಂತೆ ಸಹಕರಿಸುವಂತೆ ಸಚಿವರು ಜನರಲ್ಲಿ ಮನವಿ ಮಾಡಿದರು. ಸಚಿವರೊಂದಿಗೆ ಮುರುಘಾ ಶ್ರೀಗಳು ಉಪಸ್ಥಿತರಿದ್ದರು.