ಕರ್ನಾಟಕ

karnataka

ETV Bharat / state

ಗಾಂಧಿ ಹೆಸರಿಟ್ಟುಕೊಂಡು ಮಹಾತ್ಮನಿಗೆ ಅಪಮಾನ... ರಾಗಾ ಕುರಿತು ರಾಮುಲು ವ್ಯಂಗ್ಯ - undefined

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಭಾಗಿಯಾಗಿ ಬೇಲ್ ಪಡೆಯುವ ಮೂಲಕ ಹೋರ ಬಂದಿದ್ದಾರೆ. ಬೇಲ್ ಮೇಲೆ ಹೊರಗಿರುವ ನೆಹೆರು ಕುಟುಂಬದವರು ಚೋರ್​​​​ಗಳು ಹೊರೆತು ಪ್ರಧಾನಿ ಮೋದಿ ಅಲ್ಲ ಎಂದು ಶಾಸಕ ಶ್ರೀ ರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಪಪ್ಪು ಇದ್ದಂತೆ,ಶ್ರೀ ರಾಮುಲು.

By

Published : Mar 26, 2019, 6:14 PM IST

ಚಿತ್ರದುರ್ಗ:ಚೌಕಿದಾರ್ ಚೋರ್ ಹೈ ಎಂದು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ರಾಹುಲ್​ ಗಾಂಧಿ ಬಹಿರಂಗವಾಗಿ ಹೇಳಲಿ ಎಂದು ಶಾಸಕ ಶ್ರೀ ರಾಮುಲು ಸವಾಲೆಸೆದರು.

ರಾಹುಲ್ ಗಾಂಧಿ ಪಪ್ಪು ಇದ್ದಂತೆ,ಶ್ರೀ ರಾಮುಲು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಮಲ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮೀಯವರ ಪರ ಪ್ರಚಾರಕ್ಕೆ ತೆರಳುವ ಮುನ್ನ ಖಾಸಗಿ ಹೋಟೆಲ್​​​​ನಲ್ಲಿ ಮಾತನಾಡಿದ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಭಾಗಿಯಾಗಿ ಬೇಲ್ ಪಡೆಯುವ ಮೂಲಕ ಹೋರ ಬಂದಿದ್ದಾರೆ. ಬೇಲ್ ಮೇಲೆ ಹೊರಗಿರುವ ನೆಹೆರು ಕುಟುಂಬದವರು ಚೋರ್​​​​ಗಳು ಹೊರೆತು ಪ್ರಧಾನಿ ಮೋದಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ರಾಹುಲ್ ಗಾಂಧಿ ಎಂದು ಹೆಸರು ಇಟ್ಟುಕೊಂಡಿರುವುದು ಮಹಾತ್ಮ ಗಾಂಧಿಯವರಿಗೆ ಅಪಮಾನ ಮಾಡಿದ್ದಂತೆ. ಅವರ ಹೆಸರಿನಲ್ಲಿ ಸೇರಿಸಿಕೊಂಡಿರುವ ಗಾಂಧಿಯನ್ನುತೆಗೆದುಹಾಕಲಿ. ಗಾಂಧಿ ಹೆಸರು ಇಟ್ಟುಕೊಂಡು ದೇಶ ವಿದೇಶದಲ್ಲಿ ಮಹಾತ್ಮಾ ಗಾಂಧಿಯವರ ಮರ್ಯಾದೆ ಕಳೆಯುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

For All Latest Updates

TAGGED:

ABOUT THE AUTHOR

...view details