ಚಿತ್ರದುರ್ಗ:ಇಡಿ ಕಚೇರಿಯಲ್ಲಿ ಡಿಕೆಶಿ ಕಣ್ಣೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಮಂತ್ರಿ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿ ಅಣ್ಣ ನನ್ನನ್ನು ಕ್ಷಮಿಸಿ ಬಿಡಿ ಎಂದು ಅವರ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಮಾತನಾಡಿದ ಅವರು ನಾನು ಕೈ ಮುಗಿದು ಕೇಳುತ್ತೇನೆ, ಡಿಕೆಶಿ ಅಣ್ಣ ನನ್ನನ್ನು ಕ್ಷಮಿಸಿ ಎಂದಿದ್ದಾರೆ. ಡಿಕೆಶಿ ಅವ್ರು ಕೆಣಕಿ ಮಾತನಾಡುತ್ತಿದ್ದರು, ನಾನು ಕೂಡ ಕೆಣಕುವ ರೀತಿಯಲ್ಲಿ ಮಾತನಾಡಿದ್ದೆ. ನಾನು ಮನಸ್ಸಿನಿಂದ ಯಾವ ಮಾತು ಕೂಡಾ ಆಡಿಲ್ಲ. ನನ್ನ ಮಾತಿನಿಂದ ನೋವಾಗಿದ್ದಾರೆ, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು, ಪರ್ಸನಲ್ ಆಗಿ ಅಲ್ಲ. ದಯವಿಟ್ಟು ಅಣ್ಣನವರೇ ನನ್ನ ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ್ದಾರೆ.