ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.
ಇಹಲೋಕ ತ್ಯಜಿಸಿದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿ - ಶ್ರೀ ಮಾರ್ಕಂಡೇಯ ಮುನಿ
ಮಾದಾರ ಮರುಳಸಿದ್ಧ ಪೀಠ ಸೇರಿದಂತೆ ಅನೇಕ ಪೀಠಗಳಿಗೆ ಮುಕುಟಮಣಿಯಂತಿದ್ದ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿಯವರು ನಿಧನ ಹೊಂದಿದ್ದಾರೆ.
ಶ್ರೀಶೈಲ ಮಠ, ಕಡಪ ಮಠ, ಬೆಜವಾಡ ಮಠ, ಕೊಂಕಲ್ ಮಠ, ನೆಲಮಂಗಲ ಮಠ, ರಾವಂದೂರು ಮಾದಾರ ಚೆನ್ನಯ್ಯ ಗುರುಪೀಠ, ಹಿರೇಸಿಂಧೋಗಿ ಮಾದಾರ ಮರುಳಸಿದ್ಧ ಪೀಠ ಸೇರಿದಂತೆ ಅನೇಕ ಪೀಠಗಳಿಗೆ ಮುಕುಟಮಣಿಯಂತಿದ್ದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿಯವರು ಜಂಬೂ ಶಾಂತಿ (ನಿಧನ) ಹೊಂದಿದ್ದಾರೆ. ಇದರಿಂದಾಗಿ ಭಕ್ತವೃಂದದಲ್ಲಿ ದುಃಖ ಮನೆಮಾಡಿದೆ.
ಕೋಡಿಹಳ್ಳಿಯ ಆದಿಜಾಂಬವ ಮಠಕ್ಕೆ ಕ್ರಿ.ಶ.1893 ರಲ್ಲಿ ಮೈಸೂರು ದಿವಾನರು ಕಂಚಿನ ಬಿಲ್ಲೆ, ಜವಾನರ ಸೇವೆ ಒದಗಿಸಿದ್ದರು. ಆಗಿನ ಕಾಲದಲ್ಲಿ ಬೇರೆ ಯಾವುದೇ ಜಾತಿಯ ಮಠಾಧೀಶರಿಗೆ ನೀಡದ ಬಿರುದು, ಮರ್ಯಾದೆ, ಹಕ್ಕು, ಸೌಲಭ್ಯಗಳನ್ನು ಒದಗಿಸಿದ್ದರು ಎನ್ನುವುದು ಇತಿಹಾಸ.