ಕರ್ನಾಟಕ

karnataka

ETV Bharat / state

ಸ್ಪರ್ಧೆ ವೇಳೆ ಜನರತ್ತ ನುಗ್ಗಿ ಬಂದ ಎತ್ತುಗಳು: ವೃದ್ಧೆಯ ಕಾಲು ಮುರಿತ - hiriyuru bullock cart race

ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆ ವೇಳೆ ನಡೆದ ಅವಘಡದಲ್ಲಿ ವೀಕ್ಷಕರು ಗಾಯಗೊಂಡಿದ್ದಾರೆ.

spectators injured during bullock cart race
ಸ್ಪರ್ಧೆ ವೇಳೆ ಜನರತ್ತ ನುಗ್ಗಿ ಬಂದ ಎತ್ತುಗಳು

By

Published : Mar 11, 2021, 3:13 PM IST

ಚಿತ್ರದುರ್ಗ: ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಎತ್ತಿನ ಗಾಡಿಗಳು ಜನರ ಮೇಲೆ ಹರಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ನಡೆದಿದೆ.

ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ

ಶಿವರಾತ್ರಿ ಹಬ್ಬದ ಪ್ರಯುಕ್ತ ಸೊಂಡೆಕೆರೆ ಗ್ರಾಮದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ವೇಳೆ, 60ಕ್ಕೂ ಅಧಿಕ ಜೋಡೆತ್ತಿನ ಗಾಡಿಗಳು ಆಗಮಿಸಿದ್ದವು. ಸ್ಪರ್ಧೆ ವೀಕ್ಷಣೆಗೆಗಾಗಿ ಸುತ್ತಮುತ್ತಲಿನ ಗ್ರಾಮದ ಜನರು ಬಂದಿದ್ದರು. ಈ ಜನದಟ್ಟಣೆ ನೋಡಿ ಹೆದರಿದ ಎತ್ತುಗಳು ದಿಢೀರನೆ ವೀಕ್ಷಕರೆಡೆ ಓಡಿಬಂದಿವೆ. ಎತ್ತಿನಗಾಡಿಯೊಂದು ಅನಸೂಯಮ್ಮ (67) ಎಂಬ ವೃದ್ಧೆ ಮೇಲೆ ಹರಿದಿದ್ದು, ಅವರ ಕಾಲು ಮುರಿದಿದೆ. ಇನ್ನೂ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ: ಮೂವರು ಗೆಳೆಯರು ಪೊಲೀಸ್ ವಶಕ್ಕೆ

ಸ್ಥಳದಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ಸ್ಪರ್ಧೆಯನ್ನು ನಿಲ್ಲಿಸಲಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ABOUT THE AUTHOR

...view details