ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ. ಈಗಾಗಲೇ ಮತದಾನ ಆರಂಭವಾಗಿದ್ದು, ಜನ ಮುಂಜಾನೆಯಿಂದಲೇ ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ.
ವಿಶೇಷ ಚೇತನರಿಗೆ ಹಕ್ಕು ಚಲಾಯಿಸಲು ಕೋಟೆನಾಡಲ್ಲಿ ವಿಶೇಷ ಮತಗಟ್ಟೆ.. ಕರ್ತವ್ಯದಲ್ಲಿರುವ ಸಿಬ್ಬಂದಿ ಕೂಡ ದಿವ್ಯಾಂಗರು.. - ಲೋಕಸಭಾ ಚುನಾವಣೆ
ಮತದಾನದಿಂದ ದೂರ ಉಳಿಯುತ್ತಿದ್ದ ದಿವ್ಯಾಂಗರಿಗಾಗಿ ಜಿಲ್ಲಾ ಚುನಾವಣಾಧಿಕಾರಿ ವಿಶೇಷ ಚೇತನರ ಮತಗಟ್ಟೆ ನಿರ್ಮಾಣ ಮಾಡಿ ಅವರೂ ಹಕ್ಕು ಚಲಾಯಿಸಲು ಉತ್ತಮ ಅವಕಾಶ ಕಲ್ಪಿಸಿದ್ದಾರೆ.

ವಿಶೇಷ ಮತಗಟ್ಟೆ
ಇತ್ತ ಜನ ಸಾಮಾನ್ಯರಿಗೆ ಮತದಾನ ಮಾಡಲು ನಿರ್ಮಾಣ ಮಾಡುವ ಮತಗಟ್ಟೆಗಳಂತೆ ಚಿತ್ರದುರ್ಗದಲ್ಲಿ ವಿಶೇಷ ಚೇತನರಿಗಾಗಿಯೇ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ವಿಶೇಷ ಚೇತನ ಮತಗಟ್ಟೆ
ಮತದಾನದಿಂದ ದೂರ ಉಳಿಯುತ್ತಿದ್ದ ವಿಶೇಷ ಚೇತನರಿಗೆ ಜಿಲ್ಲಾ ಚುನಾವಣಾಧಿಕಾರಿ ವಿಶೇಷ ಚೇತನರ ಮತಗಟ್ಟೆ ನಿರ್ಮಾಣ ಮಾಡಿ ಮತದಾನ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕೂಡ ವಿಶೇಷ ಚೇತನರಾಗಿರುವುದು ಮತ್ತೊಂದು ವಿಶೇಷ.