ಕರ್ನಾಟಕ

karnataka

ETV Bharat / state

ಸಮ್ಮಿಶ್ರ ಸರ್ಕಾರದಲ್ಲಿದ್ರು ಸೈಡ್​ ಆ್ಯಕ್ಟರ್​ ಸಿಎಂ: ಹೆಚ್​ಡಿಕೆಗೆ ಕಟೀಲ್​ ಟಾಂಗ್​ - ಬಿಜೆಪಿ ಜಿಲ್ಲಾ ಘಟಕ

ರಾಜ್ಯದಲ್ಲಿ 2013 ರಿಂದ 18 ರ ತನಕ ವಿಲನ್ ಸರ್ಕಾರವಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಹೀರೋ  ಸರ್ಕಾರ ಇದ್ದು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸೈಡ್ ಆ್ಯಕ್ಟರ್ ಮುಖ್ಯಮಂತ್ರಿಯೊಬ್ಬರು ಇದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಜಿ ಸಿಎಂ ಹೆಚ್ಡಿಕೆಯವರ ಹೆಸರು ಹೇಳದೆ ಬಹಿರಂಗವಾಗಿ ಟಾಂಗ್ ನೀಡಿದ್ದಾರೆ.

ಹೆಚ್ಡಿಕೆಗೆ ಕಟೀಲ್ ಟಾಂಗ್

By

Published : Sep 16, 2019, 5:09 PM IST

Updated : Sep 16, 2019, 10:47 PM IST

ಚಿತ್ರದುರ್ಗ:ರಾಜ್ಯದಲ್ಲಿ 2013 ರಿಂದ 18 ರ ತನಕ ವಿಲನ್ ಸರ್ಕಾರವಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಹೀರೋ ಸರ್ಕಾರ ಇದ್ದು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸೈಡ್ ಆ್ಯಕ್ಟರ್ ಮುಖ್ಯಮಂತ್ರಿಯೊಬ್ಬರು ಇದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಜಿ ಸಿಎಂ ಹೆಚ್ಡಿಕೆಯವರ ಹೆಸರು ಹೇಳದೆ ಬಹಿರಂಗವಾಗಿ ಟಾಂಗ್ ನೀಡಿದ್ದಾರೆ.

ಹೆಚ್ಡಿಕೆಗೆ ಕಟೀಲ್ ಟಾಂಗ್

ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪೂರ್ಣ ಮುಖ್ಯಮಂತ್ರಿ ಅಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿದ್ದ ಸೈಡ್ ಆ್ಯಕ್ಟರ್ ಸಿಎಂ ಒಬ್ಬರಿದ್ದರು. ಸೈಡ್ ಆ್ಯಕ್ಟರ್ ಸಿಎಂ ಮಡಿಕೇರಿ ಹಾಗೂ ಸುಳ್ಯಾ ಭಾಗದಲ್ಲಿ ನೆರೆ ಎದುರಾದಾಗ ಸಂತ್ರಸ್ತರಿಗೆ ಸರಿಯಾದ ಪರಿಹಾರ ನೀಡಿಲ್ಲ.

ಅದೇ ಭಾಗದಲ್ಲಿ ಮರಳಿ ನೆರೆ ಬಂದಾಗ ನಮ್ಮ ಸಿಎಂ ಯಡಿಯೂರಪ್ಪ ಸಾಕಷ್ಟು ಸಂತ್ರಸ್ತರಿಗೆ ಪರಿಹಾರ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಕೇಳಿದ್ದನ್ನು ಕೊಡುವ ಕಾಮಧೇನು ಇದ್ದಂತೆ ಎಂದು ಸಿಎಂ ಯಡಿಯೂರಪ್ಪ ಪರ ಕಟೀಲ್ ಮಾತನಾಡಿದ್ದಾರೆ.

ಇನ್ನು ಮೆಡಿಕಲ್ ಕಾಲೇಜ್ ಬಗ್ಗೆ ಪ್ರತಿಕ್ರಿಯಿಸಿದ ಅವರು ಚಿತ್ರದುರ್ಗಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ನ್ನು ಹೆಚ್ಡಿಕೆ ತಮ್ಮ ಜಿಲ್ಲೆಗೆ ಮಂಜೂರು ಮಾಡಿಕೊಂಡ್ರು. ಆ ಮೆಡಿಕಲ್ ಕಾಲೇಜು ಮರಳಿ ಜಿಲ್ಲೆಗೆ ತರುವ ಭರವಸೆ ನೀಡ್ತಿನಿ ಎಂದರು.

Last Updated : Sep 16, 2019, 10:47 PM IST

ABOUT THE AUTHOR

...view details