ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ ನೈತಿಕತೆಯೂ ಇಲ್ಲ.. ಕ್ವಾಲಿಫಿಕೇಶನ್ನೂ ಇಲ್ಲ: ರಾಮುಲು - ಚಿತ್ರದುರ್ಗ ಲೇಟೆಸ್ಟ್ ಸುದ್ದಿ

ಅಧಿಕಾರ ಕಳೆದುಕೊಂಡ ಮೇಲೆ ಸಿದ್ಧರಾಮಯ್ಯಗೆ ಮತಿಭ್ರಮಣೆಯಾಗಿದೆ. ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಸದ್ಯ ಅವರು ರಾಜಕೀಯ ನಿವೃತ್ತಿ ಪಡೆಯುವುದು ಒಳಿತು ಎಂದು ಸಚಿವ ರಾಮುಲು ಹೇಳಿದ್ದಾರೆ.

amulu
ರಾಮುಲು

By

Published : Jan 16, 2021, 4:17 PM IST

ಚಿತ್ರದುರ್ಗ: ಸಿದ್ಧರಾಮಯ್ಯಗೆ ನೈತಿಕತೆ ಇಲ್ಲ, ಕ್ವಾಲಿಫಿಕೇಶನ್ನೂ ಇಲ್ಲ. ದೇವೇಗೌಡರ ಬೆನ್ನಿಗೆ‌ ಚೂರಿ ಹಾಕಿ ಕಾಂಗ್ರೆಸ್ ಸೇರಿದವರು ಅವರು ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದರು. ಕಾಂಗ್ರೆಸ್​ ಈಗ ಮೂರು ಬಾಗಿಲಾಗಿದೆ. ಮೊದಲು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ ಎಂದು ವಾಕ್ಪ್ರಹಾರ ನಡೆಸಿದರು.


ಅಧಿಕಾರ ಕಳೆದುಕೊಂಡ ಮೇಲೆ ಸಿದ್ಧರಾಮಯ್ಯಗೆ ಮತಿಭ್ರಮಣೆಯಾಗಿದೆ. ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಸದ್ಯ ಅವರು ರಾಜಕೀಯ ನಿವೃತ್ತಿ ಪಡೆಯುವುದು ಒಳಿತು ಎಂದು ಕುಟುಕಿದರು.

ಸಿಎಂ ಬಿಎಸ್​​​ವೈ ಮನೆ ಮಠ ಬಿಟ್ಟು 40 ವರ್ಷ ಪಕ್ಷಕ್ಕಾಗಿ ದುಡಿದವರು. ಅವರ ಬಗ್ಗೆ ಮಾತನಾಡುವುದು ನಮಗೆ ನೋವು ತಂದಿದೆ. ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾಗುತ್ತದೆ. ಏನಾದರೂ ಸಮಸ್ಯೆಯಿದ್ದರೆ ಚರ್ಚಿಸಲು ರಾಜ್ಯಾಧ್ಯಕ್ಷ ಕಟೀಲು ಸಿದ್ಧರಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ವರಿಷ್ಠರು ಸ್ಪಷ್ಟ ಪಡಿಸಿದ್ದು, ಯಾರೂ ಹಿಟ್ ಅಂಡ್ ರನ್ ಹೇಳಿಕೆ ಕೊಡಬಾರದು ಎಂದು ಪರೋಕ್ಷವಾಗಿ ಹೆಚ್. ವಿಶ್ವನಾಥ್ ಹಾಗೂ ಶಾಸಕ ಯತ್ನಾಳ್​ಗೆ ಎಚ್ಚರಿಕೆ ಕೊಟ್ಟರು.

ABOUT THE AUTHOR

...view details