ಚಿತ್ರದುರ್ಗ:ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೋವಿಡ್-19 ಸಂದರ್ಭದಲ್ಲಿ 10 ಆಸ್ಪತ್ರೆಗಳ ಜವಾಬ್ದಾರಿ ನಿರ್ವಹಣೆ ಮಾಡಬಹುದಿತ್ತು. ಅದರೆ ಅವರು ಈ ವೇಳೆ ಮನೆಯಿಂದ ಹೊರ ಬಂದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಲೇವಡಿ ಮಾಡಿದರು.
ಕೊರೊನಾ ಉಪಕರಣಗಳ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆದಿದೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಿಂದ ಈಚೆ ಬಂದಿರುವುದು ನೋಡಿದ್ದಿರಾ ಎಂದು ಪ್ರಶ್ನೆ ಮಾಡಿದರು.