ಚಿತ್ರದುರ್ಗ: ಕುರಿ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಹಿರಿಯೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಮೂಲದ ಲೋಕೇಶ ರಂಗರೆಡ್ಡಿ(22) ಹಾಗೂ ಮಾರುತಿ ಪಿ.ಚಂದ್ರಪ್ಪ (25) ಬಂಧಿತರು. ಆರೋಪಿಗಳು ಹಿರಿಯೂರು ನಗರದಲ್ಲಿ ಅನುಮಾನ್ಪದವಾಗಿ ಓಡಾಡುತ್ತಿದ್ದರು. ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿಗಳು ಕುರಿ ಕಳ್ಳತನ ಮಾಡುವ ಬಗ್ಗೆ ಬಾಯ್ಬಿಟ್ಟಿದ್ದಾರೆ.