ಕರ್ನಾಟಕ

karnataka

ETV Bharat / state

ಅಗ್ನಿ ಅವಘಡಕ್ಕೆ ಕುರಿಗಳ ಸಾವು: ಮುಗಿಲು ಮುಟ್ಟಿದ ಕುರಿಗಾಹಿಯ ಆಕ್ರಂದನ - ಚಿತ್ರದುರ್ಗದಲ್ಲಿ ಅಗ್ನಿ ಅವಘಡ

ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಗುಡ್ಡದಲ್ಲಿ ಮೇಯುತ್ತಿದ್ದ ಕುರಿಗಳೆಲ್ಲಾ ಬೆಂಕಿಗೆ ಸುಟ್ಟು ಹೋಗಿವೆ.

ಕುರಿಗಳ ಸಾವು

By

Published : Jul 31, 2019, 10:09 PM IST

ಚಿತ್ರದುರ್ಗ:ಅಗ್ನಿ ಅನಾಹುತಕ್ಕೆ ನೂರಾರು ಕುರಿಗಳು ಸಾವನ್ನಪ್ಪಿರುವ ಘಟನೆ ಕೋಟೆನಾಡಿನ ಹೊಳಲ್ಕೆರೆ ತಾಲೂಕಿನ ನಂದನ ಹೊಸೂರು ಸಮೀಪದ ಗುಂಡಿಕೆರೆ ಗ್ರಾಮದಲ್ಲಿ ನಡೆದಿದೆ.

ಬೆಟ್ಟದಲ್ಲಿ ಮೇಯುತ್ತಿದ್ದ 250ಕ್ಕೂ ಹೆಚ್ಚು ಕುರಿಗಳು ಬಲಿಯಾಗಿದ್ದು, ಇವು ಅಮೃತಾಪುರ ಗ್ರಾಮದ ನಿವಾಸಿ ತಿಮ್ಮಪ್ಪ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ. ಬೆಟ್ಟದಲ್ಲಿ ಹೊತ್ತಿಕೊಂಡಿದ್ದ ಬೆಂಕಿಗೆ ಸಿಲುಕಿ ಕುರಿಗಳು ಅರೆಬರೆ ಬೆಂದಿದ್ದು, ಕುರಿಗಾಹಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಸುಮಾರು ಐದು ಲಕ್ಷ ಮೌಲ್ಯದ ಕುರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಘಟನ ಸ್ಥಳಕ್ಕೆ ಚಿತ್ರಹಳ್ಳಿ ಪಿಎಸ್ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details