ಕರ್ನಾಟಕ

karnataka

ETV Bharat / state

ಅಕ್ಟೋಬರ್-2 ರಿಂದ ಕೋಟೆನಾಡಲ್ಲಿ 'ಶರಣ ಸಂಸ್ಕ್ರತಿ ಉತ್ಸವ': ಸಾಧಕರಿಗೆ 'ಮುರುಘಾ ಶ್ರಿ' ಪ್ರಶಸ್ತಿ ಪ್ರಧಾನ - Sharana samskriti Festival at chitradurga

ಅಕ್ಟೋಬರ್ -2 ರಿಂದ ಚಿತ್ರದುರ್ಗದಲ್ಲಿ 'ಶರಣ ಸಂಸ್ಕ್ರತಿ ಉತ್ಸವ' ಜರುಗಲಿದ್ದು, ಪ್ರತೀ ವರ್ಷದಂತೆ ಹಲವು ಸಾಧಕರಿಗೆ 'ಮುರುಘಾ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಶರಣ ಸಂಸ್ಕ್ರತಿ ಉತ್ಸವ ಕುರಿತು ಹೇಳಿದ ಡಾ,ಶಿವಮೂರ್ತಿ ಮುರುಘಾ ಶರಣರು

By

Published : Sep 20, 2019, 4:34 PM IST

ಚಿತ್ರದುರ್ಗ:ಚಿತ್ರದುರ್ಗದಲ್ಲಿ ಮುರುಘಾ ಮಠದ ವತಿಯಿಂದ ನೀಡಲಾಗುವ ಪ್ರತಿಷ್ಟಿತ 'ಮುರುಘಾ ಶ್ರೀ' ಪ್ರಶಸ್ತಿಗೆ ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.

ಶರಣ ಸಂಸ್ಕ್ರತಿ ಉತ್ಸವ ಕುರಿತು ಡಾ.ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದರು.

ಅಕ್ಟೋಬರ್- 2 ರಿಂದ ನಡೆಯುವ 'ಶರಣ ಸಂಸ್ಕ್ರತಿ ಉತ್ಸವ'ದಲ್ಲಿ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುವುದು. ಕಳೆದ 20 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಮುರುಘಾ ಮಠದಿಂದ ನೀಡುವ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ.ಸಿದ್ದಲಿಂಗಯ್ಯ ಸೇರಿದಂತೆ ಧಾರವಾಡದ ಮುರುಘಾ ಶ್ರೀಗಳಾದ ಮಲ್ಲಿಕಾರ್ಜುನ ಸ್ವಾಮಿಗಳು, ವೀರಶೈವ ಸಮುದಾಯದ ಜಯಕುಮಾರ್, ಬಸವ ಇಂಟರ್ ನ್ಯಾಷನಲ್ ಫೌಂಡೇಷನ್ ಟ್ರಸ್ಟ್​​ನ ಮಹದೇವಯ್ಯ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ರು.

ABOUT THE AUTHOR

...view details