ಚಿತ್ರದುರ್ಗ:ಪ್ರತಿವರ್ಷ ದಸರಾ ಹಬ್ಬದ ಪ್ರಯುಕ್ತ ಅದ್ಧೂರಿ ಹಾಗೂ ವಿಶಿಷ್ಟವಾಗಿ ಜರಗುವ ಶರಣ ಸಂಸ್ಕೃತಿ ಉತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲು ಮುರುಘಾ ಮಠ ನಿರ್ಧರಿಸಿದೆ.
ಶರಣ ಸಂಸ್ಕೃತಿ ಉತ್ಸವ ಈ ಬಾರಿ ಸರಳ ಆಚರಣೆ: ಮುರುಘಾ ಶ್ರೀ - ಚಿತ್ರದುರ್ಗ ನ್ಯೂಸ್
ಮುರುಘಾ ಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಸರಳವಾಗಿ ನಡೆಯಲಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಈ ಬಾರಿ ಸರಳವಾಗಿ ಶರಣ ಸಂಸ್ಕೃತಿ ಉತ್ಸವ ಆಚರಿಸಲಾಗುವುದು: ಮುರುಘಾ ಶ್ರೀ
ಈ ಕುರಿತು ಪ್ರತಿಕ್ರಿಯಿಸಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಉತ್ಸವಕ್ಕೆ ಪ್ರತಿವರ್ಷ ಲಕ್ಷಗಟ್ಟಲೇ ಭಕ್ತರು ಆಗಮಿಸುತ್ತಿದ್ದರು. ಕೊರೊನಾ ಹಿನ್ನೆಲೆ, ಈ ಬಾರಿ ನೇರಪ್ರಸಾರದ ಮೂಲಕ ಮನೆಯಲ್ಲಿಯೇ ಶರಣ ಸಂಸ್ಕೃತಿ ಉತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳುಲು ವ್ಯವಸ್ಥೆ ಮಾಡಲಾಗಿದೆ. ಉತ್ಸವ ಅಕ್ಟೋಬರ್ 22ಕ್ಕೆ ಆರಂಭವಾಗಿ 28ಕ್ಕೆ ಮುಕ್ತಾಯಗೊಳ್ಳಲಿದೆ.
24ಕ್ಕೆ ಉತ್ಸವದಲ್ಲಿ ಸಿಎಂ ಯಡಿಯೂರಪ್ಪನವರು ಭಾಗಿಯಾಗಿ ಮುರುಘಾ ಮಠದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಮುರುಘಾ ಶ್ರೀ ಮ್ಯೂಸಿಯಂಗೆ ಚಾಲನೆ ನೀಡಲಿದ್ದಾರೆ ಎಂದರು.