ಚಿತ್ರದುರ್ಗ: ಲಾಕ್ಡೌನ್ ಹಾಗೂ ಕೊರೊನಾದಿಂದ ಶಾಮಿಯಾನ ಅಂಗಡಿ ಮಾಲೀಕರು ಹಾಗೂ ಕೆಲಸಗಾರರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಕೂಡಲೇ ನೆರವು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದಲ್ಲಿ ಶಾಮಿಯಾನ ಅಂಗಡಿ ಮಾಲೀಕರ ಪ್ರತಿಭಟನೆ - chitradurga protest today
ಚಿತ್ರದುರ್ಗದ ಜಿಲ್ಲಾಧಿಕಾರಿ ವೃತ್ತದಲ್ಲಿ ಶಾಮಿಯಾನ ಮಾಲೀಕರು ಹಾಗೂ ಕೆಲಸಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಚಿತ್ರದುರ್ಗದಲ್ಲಿ ಶಾಮಿಯಾನ ಅಂಗಡಿ ಮಾಲೀಕರ ಪ್ರತಿಭಟನೆ
ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಮಾಲೀಕರು ಹಾಗೂ ಕೆಲಸಗಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಘೋಷಣೆ ಕೂಗಿದರು.
ಕ್ಷೌರಿಕರು, ಆಟೋ ಚಾಲಕರು, ಗಾರೆ ಕಾರ್ಮಿಕರಿಗೆ ನೀಡುವಂತೆ ನಮಗೂ ಅನುದಾನ ಬಿಡುಗಡೆ ಮಾಡಬೇಕು. ಸಿಎಂ ಬಿಎಸ್ವೈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿದರು.