ಚಿತ್ರದುರ್ಗ:ನಾನು ವೀರಶೈವ ಮಹಾಸಭದ ಅಧ್ಯಕ್ಷನಾದ ಕೆಲವೇ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದರು ಎಂದು ಕೈ ಶಾಸಕ ಶಾಮನೂರು ಶಿವಶಂಕರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಹಿರಂಗವಾಗಿ ಟಾಂಗ್ ನೀಡಿದರು.
ಲಿಂಗಾಯತರನ್ನು ಒಡೆಯಲು ಹೋಗಿ ಕೈ ಸುಟ್ಟಿಕೊಂಡಿದ್ದು ಯಾರು?: ಸಿದ್ದರಾಮಯ್ಯಗೆ ಎಸ್ಎಸ್ ಟಾಂಗ್ - ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಹಿರಂಗವಾಗಿ ಟಾಂಗ್
ನಾನು ವೀರಶೈವ ಮಹಾಸಭದ ಅಧ್ಯಕ್ಷನಾದ ಕೆಲವೇ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದರು ಎಂದು ಕೈ ಶಾಸಕ ಶಾಮನೂರು ಶಿವಶಂಕರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಹಿರಂಗವಾಗಿ ಟಾಂಗ್ ನೀಡಿದರು.
ಜಿಲ್ಲೆಯ ಸಿರಿಗೆರೆ ಮಠದಲ್ಲಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ವೀರಶೈವರನ್ನು ಒಗ್ಗೂಡಿಸುವ ಕೆಲಸದ ನೇತೃತ್ವನ್ನು ಸಿರಿಗೆರೆ ಡಾಕ್ಟರ್ ಶ್ರೀ ಶಿವಮೂರ್ತಿ ಶಿವಚಾರ್ಯ ಶ್ರೀಗಳು ವಹಿಸಲಿ. ವೀರಶೈವ ಸಮಾಜ ವಿಭಜಿಸಲು ಹೋಗಿ ಯಾರು ಕೈ ಸುಟ್ಟುಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಮಾಡಲು ನಾವು ಬಿಡಲಿಲ್ಲ ಎಂದು ಕೈ ಶಾಸಕ ಶಾಮನೂರು ಶಿವಶಂಕರಪ್ಪನವರು ಪರೋಕ್ಷವಾಗಿ ತಮ್ಮ ಪಕ್ಷದವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಪ್ರಸಂಗ ನಡೆಯಿತು.
ಇನ್ನೂ ಈ ಹೇಳಿಕೆಯನ್ನು ಸಿಎಂ ಯಡಿಯೂರಪ್ಪ ಇದ್ದ ವೇದಿಕೆಯಲ್ಲೇ ಶಾಮನೂರು ಹೇಳಿಕೆ ನೀಡಿದ್ದು, ಗಣತಿಯಲ್ಲಿ ವೀರಶೈವ ಲಿಂಗಾಯಿತ ಎಂದೇ ಬರೆಸಲು ಶಾಮನೂರು ಸಮುದಾಯದವರಿಗೆ ಕರೆ ನೀಡಿದರು.