ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಸಿಡಿಲು ಬಡಿದು ಏಳು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು - Seven people injured in Thunderbolt

ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಸಿಹಿನೀರುಕಟ್ಟೆ ಗ್ರಾಮದಲ್ಲಿ ಸಿಡಿಲಿಗೆ ಏಳು ಜನರು ಗಾಯಗೊಂಡಿದ್ದು, ಅನೇಕ ಗುಡಿಸಲುಗಳು ನೆಲಸಮವಾಗಿವೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Seven people injured in Thunderbolt
ಸಿಡಿಲಿಗೆ ಏಳು ಜನರಿಗೆ ಗಾಯ

By

Published : Apr 22, 2020, 11:53 PM IST

ಚಿತ್ರದುರ್ಗ: ಸಿಡಿಲಿಗೆ ಏಳು ಜನರು ಗಾಯಗೊಂಡಿದ್ದು, ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಿಡಿಲಿಗೆ ಏಳು ಜನರಿಗೆ ಗಾಯ

ಹೊಳಲ್ಕೆರೆ ತಾಲೂಕಿನ ಸಿಹಿನೀರುಕಟ್ಟೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಚಂದ್ರಾಬಾಯಿ, ರತ್ನಾಬಾಯಿ, ರುದ್ರಿಬಾಯಿ, ಸಾಕಿಬಾಯಿ, ರಂಗನಾಯಕ, ವೆಂಕಟೇಶ ಎಂಬುವರು ಗಾಯಗೊಂಡಿದ್ದು, ಇವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಡಿಲು ಬಡಿದು ಏಳು ಜನರಿಗೆ ಗಾಯ

ತಾಲೂಕಿನ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ರಾಮಗಿರಿ ಸಿದ್ದರಾಮಯ್ಯ ಬಡಾವಣೆಯಲ್ಲಿ ಗುಡಿಸಲುಗಳು ನೆಲಕ್ಕುರುಳಿವೆ. ಮಳೆ, ಗಾಳಿ ರಭಸಕ್ಕೆ ಸಿದ್ದರು, ಅಲೆಮಾರಿ ಜನಾಂಗದವರ ಸುಮಾರು 50ಕ್ಕೂ ಹೆಚ್ಚು ಗುಡಿಸಲುಗಳು ಬಿದ್ದಿವೆ. ಕೆಲ ಗುಡಿಸಲಿನ ಮೇಲ್ಛಾವಣಿ ಹಾರಿ ಹೋಗಿವೆ.

ABOUT THE AUTHOR

...view details