ಕರ್ನಾಟಕ

karnataka

ETV Bharat / state

ಮಾರಾಟಗಾರರಿಗೆ ಸಕಾಲಕ್ಕೆ ಮದ್ಯ ಸಿಗದ ಪರಿಸ್ಥಿತಿ ನಿರ್ಮಾಣ: ಎಸ್.ಗುರುಸ್ವಾಮಿ - alcohol sellers problem

ಅಬಕಾರಿ ಇಲಾಖೆಯ ಹೊಸ ಇ-ಇಂಡೆಂಟಿಂಗ್ ಸಾಫ್ಟ್​​ವೇರ್ ನಿಂದಾಗಿ ಮದ್ಯ ಮರಾಟಗಾರರಿಗೆ ಸಕಾಲಕ್ಕೆ ಮದ್ಯ ಸಿಗದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ ಹೇಳಿದರು.

s guruswamy
ಎಸ್ ಗುರುಸ್ವಾಮಿ

By

Published : Jul 7, 2022, 5:40 PM IST

ಚಿತ್ರದುರ್ಗ: ಏಪ್ರಿಲ್ 4ರಿಂದ ಹೊಸ ಇ-ಇಂಡೆಂಟಿಂಗ್ ವ್ಯವಸ್ಥೆ ಜಾರಿ ಆಗಿದೆ. ಅಬಕಾರಿ ಇಲಾಖೆಯ ಇ-ಇಂಡೆಂಟಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆ ಸರಿಪಡಿಸದಿದ್ದರೆ ಮದ್ಯದಂಗಡಿ ಬಂದ್ ಮಾಡುವುದಾಗಿ ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ

ಚಿತ್ರದುರ್ಗದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮದ್ಯ ಮರಾಟಗಾರರಿಗೆ ಸಕಾಲಕ್ಕೆ ಮದ್ಯ ಸಿಗದ ದುಃಸ್ಥಿತಿ ನಿರ್ಮಾಣವಾಗಿದೆ. ಹೊಸ ಇ-ಇಂಡೆಂಟಿಂಗ್ ಸಾಫ್ಟವೇರ್ ನಿಂದಾಗಿ ಸಮಸ್ಯೆ ಉದ್ಭವಿಸಿದೆ. ಅನೇಕ ಬಾರಿ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಜುಲೈ 1ರಿಂದ ಮದ್ಯ ಖರೀದಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, 24 ಗಂಟೆಯಲ್ಲಿ ಸಮಸ್ಯೆ ಸರಿಪಡಿಸಲು ಆಗ್ರಹಿಸಿದರು.

ಇದನ್ನೂ ಓದಿ:ಗಾಣದಿಂದ ತೆಗೆದ ಶುದ್ಧ ಶೇಂಗಾ, ಕೊಬ್ಬರಿ ಎಣ್ಣೆಗೆ ಹೆಚ್ಚಿದ ಬೇಡಿಕೆ

ಮದ್ಯ ಖರೀದಿ ವ್ಯವಸ್ಥೆ ಸರಿಪಡಿಸದಿದ್ದರೆ ಮದ್ಯದಂಗಡಿ ಬಂದ್ ಮಾಡಿ ಹೋರಾಟ ಮಾಡಲಾಗುವುದು. ಶನಿವಾರದಿಂದಲೇ ರಾಜ್ಯದಲ್ಲಿ ಮದ್ಯದಂಗಡಿ ಬಂದ್ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details