ಚಿತ್ರದುರ್ಗ: ನ್ಯಾಯಬೆಲೆ ಅಂಗಡಿಯ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ಜಿಲ್ಲೆಯ ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಡಿತರ ಫಲಾನಿಭವಿಗಳಿಗೆ ಹಂಚಬೇಕಿದ್ದ ಅಕ್ಕಿ, ಎಣ್ಣೆ, ಉಪ್ಪು ಸೇರಿದಂತೆ ಎಲ್ಲವನ್ನು ಬೇರೆಡೆ ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು.
ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 40 ಚೀಲ ಅಕ್ಕಿ (20 ಕ್ವಿಂಟಾಲ್), 14 ಬಾಕ್ಸ್ ಎಣ್ಣೆ (140 ಲೀಟರ್), 25 ಉಪ್ಪಿನ ಪ್ಯಾಕೇಟ್, 8,900 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ಪಡಿತರವನ್ನು 140 ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಾಗಿತ್ತು. ಎರಡು ವರ್ಷದ ಹಿಂದಿನಿಂದ ಈ ಅಕ್ರಮ ದಾಸ್ತಾನು ಸಂಗ್ರಹಿಸಿ ಇರಿಸಲಾಗಿದೆ ಎನ್ನಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿ ಮಾಲೀಕ ಭೀಮನಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.