ಚಿತ್ರದುರ್ಗ: ಭೂತಪ್ಪ ದೇವರ ಸನ್ನಿಧಿಗೆ ಮಂಗಳವಾರ ಹಾಗೂ ಶುಕ್ರವಾರ ಭಕ್ತರ ದಂಡೇ ಹರಿದು ಬರುತ್ತದೆ. ಏಕೆಂದರೆ ಇಲ್ಲಿ ದೇವರ ಪವಾಡಗಳು ಹಾಗೂ ಹರಕೆಗಳು ಸಲ್ಲುವುದು ಈ ಎರಡೇ ದಿನ ಮಾತ್ರ. ದೇವಸ್ಥಾನ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಯಾರೇ ಆ ಮಾರ್ಗದಲ್ಲಿ ತೆರಳಿದ್ರೂ, ಈ ಭೂತಪ್ಪನ ಸನ್ನಿಧಿಗೆ ತೆರಳಿ ಆಶೀರ್ವಾದ ಪಡೆಯುತ್ತಾರಂತೆ.. ಒಂದು ವೇಳೆ ಹಾಗೆ ತೆರಳಿದರೆ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುದು ಜನರ ನಂಬಿಕೆ.
ಈ ಭೂತಪ್ಪನಿಗೆ ಕೈ ಮುಗಿಯಲೇಬೇಕು.... ಇಲ್ಲದಿದ್ದರೆ ಹೀಗಾಗುತ್ತೆ...!! - ಚಿತ್ರದುರ್ಗ
ಇಲ್ಲಿರುವ ಸಾಸಲು ಭೂತಪ್ಪನಿಗೆ ಭಕ್ತಿಯಿಂದ ಕೈ ಮುಗಿದು, ತಮ್ಮ ಕೋರಿಕೆಗಳನ್ನು ಪತ್ರದಲ್ಲಿ ಬರೆದು ಇಲ್ಲಿರುವ ಆಲದ ಮರದ ಟೊಂಗೆಗೆ ಕಟ್ಟಿ ಹರಕೆ ಕಟ್ಟಿಕೊಳ್ಳುತ್ತಾರಂತೆ.. ಆಗ ತಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ. ಇಂತಹ ಭೂತಪ್ಪನ ದೇಗುಲ ಇರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಗ್ರಾಮದಲ್ಲಿ..
ಅಲ್ಲದೆ ತಾವು ಬೇಡಿಕೊಂಡ ಇಷ್ಟಾರ್ಥಗಳು ನೆರವೇರಿದ ಮೇಲೆ ಹರಕೆ ತೀರಿಸಿ ಆಲದ ಮರಕ್ಕೆ ತಾವು ಕಟ್ಟಿದ್ದ ಹಾಳೆಗಳನ್ನು ಹರಿದು ಹಾಕಲೇಬೇಕಂತೆ. ಇಲ್ಲವಾದರೆ ತಮ್ಮ ಹರಕೆ ಪೂರ್ತಿಯಾಗುವುದಿಲ್ಲ ಅನ್ನೋದು ಭಕ್ತರ ಅಭಿಪ್ರಾಯ.. ಆ ರೀತಿ ಚೀಟಿ ಕಟ್ಟಿದ ಎರಡರಿಂದ ಮೂರು ತಿಂಗಳ ಒಳಗಾಗಿ ಭಕ್ತರ ಇಷ್ಟಾರ್ಥಗಳು ಸಿದ್ದಿಯಾಗುತ್ತವೆಯಂತೆ. ಇನ್ನು ಕೆಲ ಭಕ್ತರು ಚೀಟಿಯ ಬದಲಾಗಿ ಕಲ್ಲನ್ನು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟುವುದು ಕೂಡ ವಾಡಿಕೆ. ಈ ರೀತಿ ಕಟ್ಟಿ ಹೋದ ಭಕ್ತರ ಕಷ್ಟಗಳು ಬಗೆ ಹರಿದಿರುವ ಅನೇಕ ನಿದರ್ಶನಗಳಿದ್ದು ಭೂತಪ್ಪ ತಮ್ಮನ್ನು ಕಾಪಾಡುತ್ತಾನೆ ಎನ್ನುವುದು ಭಕ್ತರ ನಂಬಿಕೆ.
ಭೂತಪ್ಪನ ಸನ್ನಿಧಿಗೆ ಎಲ್ಲಾ ಸಮುದಾಯದ ಭಕ್ತರೂ ಕೂಡ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ದಿ ಮಾಡು ಎಂದು ದೇವರ ಹೋಗುತ್ತಾರೆ. ವಿಶೇಷವೇನಂದ್ರೆ ಈ ದೇಗುಲಕ್ಕೆ ಹಿಂದೂ, ಮುಸ್ಲಿಂ ಎನ್ನದೆ ಎಲ್ಲಾ ಸಮುದಾಯದವರು ಆಗಮಿಸಿ ಭೂತಪ್ಪನ ಆಶೀರ್ವಾದ ಪಡೆಯುತ್ತಾರಂತೆ..