ಚಿತ್ರದುರ್ಗ:ಆನೆ ನಡೆಯುವಾಗ ನಾಯಿ ಬೊಗಳಿದರೆ, ಆನೆಗೆ ಯಾವ ಪೆಟ್ಟು ಆಗಲ್ಲ ಎನ್ನುವ ಮೂಲಕ ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶ್ರೀ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಆನೆ ನಡೆಯುವಾಗ ನಾಯಿ ಬೊಗಳುತ್ತೆ... ದೊರೆಸ್ವಾಮಿ ಕುರಿತ ಹೇಳಿಕೆಗೆ ಯತ್ನಾಳ್ ವಿರುದ್ಧ ಸಾಣೆಹಳ್ಳಿ ಶ್ರೀ ಕಿಡಿ - ಹಿರಿಯ ಸ್ವಾತಂತ್ಯ್ರ ಹೋರಾಟಗಾರ ದೊರೆಸ್ವಾಮಿ
ಆನೆ ನಡೆಯುವಾಗ ನಾಯಿ ಬೊಗಳಿದರೆ, ಆನೆಗೆ ಯಾವ ಪೆಟ್ಟು ಆಗಲ್ಲ ಎನ್ನುವ ಮೂಲಕ ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶ್ರೀ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಿರಿಯ ಸ್ವಾತಂತ್ಯ್ರ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆ ವಿಚಾರವಾಗಿ ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶ್ರೀ ಆಕ್ರೋಶ ಹೊರಹಾಕಿದ್ದಾರೆ. ದೊರೆಸ್ವಾಮಿ ತುಂಬಾ ಸುಸಂಸ್ಕೃತ ವ್ಯಕ್ತಿ. ವಯಸ್ಸಿನಲ್ಲಿ ಹಿರಿಯರಲ್ಲದೇ ಜ್ಞಾನ, ಅನುಭವದಲ್ಲೂ ಹಿರಿಯರಾಗಿದ್ದಾರೆ. ಅವರು ಯಾರಿಗೂ ಕೇಡು ಬಯಸದವರು, ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಡುವುದುರಿಂದ ಅವರು ತಮ್ಮ ವ್ಯಕ್ತಿತ್ವಕ್ಕೆ ತಾವೇ ಕಳಂಕ ತಂದುಕೊಂಡಂತೆ ಎಂದರು.
ದೊರೆಸ್ವಾಮಿ ಅವರು ಹಿರಿಯರು ಅವರು ಆನೆಯಿದ್ದಂತೆ. ಆನೆ ನಡೆಯುವಾಗ ನಾಯಿ ಬೊಗಳಿದರೆ, ಆನೆಗೆ ಯಾವ ಅಪಾಯವೂ ಆಗಲ್ಲ. ಅದೇ ರೀತಿ ದೊರೆಸ್ವಾಮಿಯವ ಮೇಲೆ ಇಲ್ಲ ಸಲ್ಲದ ಹೇಳಿಕೆ ನೀಡಿದರೆ ಅವರಿಗೆ ಅದು ತಗುಲುವುದಿಲ್ಲ. ಆದರೆ, ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನ ಕೇಳಿ ಬೇಸರವಾಗಿದೆ ಎಂದು ಶ್ರೀಗಳು ಪರೋಕ್ಷವಾಗಿ ಶಾಸಕ ಯತ್ನಾಳ್ ಗೆ ಟಾಂಗ್ ಕೊಟ್ಟರು.