ಕರ್ನಾಟಕ

karnataka

ETV Bharat / state

ಗ್ರಾಮೀಣ ಪ್ರತಿಭೆಗಳಿಗೆ ಬಿಸಿ ತುಪ್ಪವಾದ ಆನ್​ಲೈನ್ ಶಿಕ್ಷಣ; ಶಾಲೆ ತೆರೆದು ಸಮಸ್ಯೆಗೆ ಮುಕ್ತಿ ನೀಡಿ - online education-2020

ಗ್ರಾಮೀಣ ಪ್ರತಿಭೆಗಳಿಗೆ ಆನ್​ಲೈನ್ ಶಿಕ್ಷಣ ನುಂಗಲಾರದ ಬಿಸಿ ತುಪ್ಪವಾಗಿದೆ. ಆನ್​ಲೈನ್ ಶಿಕ್ಷಣ ತೆಗೆದುಕೊಳ್ಳಬೇಕು ಎಂದರೆ ದುಬಾರಿ ಬೆಲೆಯ ಮೊಬೈಲ್ ಖರೀದಿ ಮಾಡಬೇಕು. ಆದರೆ, ಇದು ಬಡ ಜನರಿಗೆ ಸಾಧ್ಯವಾಗದ ಕೆಲಸ. ಅಲ್ಲಿ-ಇಲ್ಲಿ ಹಣ ಸಂಗ್ರಹಿಸಿ ಮೊಬೈಲ್​ ಖರೀದಿ ಮಾಡಿದರೂ ನೆಟ್​ವರ್ಕ್ ಬರುವುದಿಲ್ಲ. ​ಬೆಟ್ಟ-ಗುಡ್ಡದ ಮೇಲೆ ಹತ್ತಿ ಪಾಠ ಕೇಳಬೇಕು, ಇಲ್ಲವೇ ಅವರಿವರ ಮನೆ ಮೇಲೆ ಹತ್ತಬೇಕು. ಎಷ್ಟು ದಿನ ಅಂತ ಹೀಗೆ ಮಾಡುವುದು?

Rural students are facing lot of problems from online education
ಆನ್​ಲೈನ್ ಶಿಕ್ಷಣದ ಸಮಸ್ಯೆಗಳು

By

Published : Oct 1, 2020, 5:51 PM IST

ಚಿತ್ರದುರ್ಗ: ಕೊರೊನಾ ಹಾವಳಿಯನ್ನು ತಗ್ಗಿಸುವ ಸಲುವಾಗಿ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯದಂತೆ ಮಾರ್ಗಸೂಚಿಯೇನೋ ಹೊರಡಿಸಿದೆ. ಆದರೆ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆನ್​ಲೈನ್​ ಮೂಲಕ ನೀಡುವ ಶಿಕ್ಷಣದ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರ ಅಷ್ಟಾಗಿ ಗಮನ ಹರಿಸಿಲ್ಲ ಎಂಬುವುದನ್ನು ಒತ್ತಿ ಹೇಳಬೇಕಿಲ್ಲ. ಇದಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಗೋಳು ಹೊರತಾಗಿಲ್ಲ.

ಆನ್​ಲೈನ್ ಶಿಕ್ಷಣದ ಸಮಸ್ಯೆಗಳು

ಶಾಲಾ ಕಾಲೇಜುಗಳನ್ನು ತೆರೆಯದಂತೆ ಸರ್ಕಾರವೇನೋ ಮಾರ್ಗಸೂಚಿ ನೀಡಿ ಕೈ ತೊಳೆದುಕೊಂಡಿದೆ. ಅದರಂತೆ ಜಿಲ್ಲೆಯ ಸಾಕಷ್ಟು ಶಾಲಾ-ಕಾಲೇಜುಗಳು ಅನ್ಯ ಮಾರ್ಗವಿಲ್ಲದೇ ಆನ್​ಲೈನ್ ಶಿಕ್ಷಣದ ಮೊರೆ ಹೋಗಿವೆ. ಆದರೆ, ಈ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತಾಗಿದೆ. ಮೊಬೈಲ್​ ಖರೀದಿ, ನೆಟ್​ವರ್ಕ್​ ಸಮಸ್ಯೆ,​ ಅದು-ಇದು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಆನ್​ಲೈನ್ ಶಿಕ್ಷಣದ ಸಮಸ್ಯೆಗಳು

ಗ್ರಾಮೀಣ ಪ್ರತಿಭೆಗಳಿಗೆ ಆನ್​ಲೈನ್ ಶಿಕ್ಷಣ ನುಂಗಲಾರದ ತುತ್ತಾಗಿದೆ. ಆನ್​ಲೈನ್ ಶಿಕ್ಷಣ ತೆಗೆದುಕೊಳ್ಳಬೇಕು ಎಂದರೆ​ ದುಬಾರಿ ಬೆಲೆಯ ಮೊಬೈಲ್ ಖರೀದಿ ಮಾಡಬೇಕು. ಆದರೆ, ಇದು ಬಡ ಜನರಿಗೆ ಸಾಧ್ಯವಾಗದ ಕೆಲಸ. ಅಲ್ಲಿ-ಇಲ್ಲಿ ಹಣ ಸಂಗ್ರಹಿಸಿ ಮೊಬೈಲ್​ ಖರೀದಿ ಮಾಡಿದರೂ ಸಹ ನೆಟ್​ವರ್ಕ್ ಬರುವುದಿಲ್ಲ. ​ಬೆಟ್ಟ-ಗುಡ್ಡದ ಮೇಲೆ ಹತ್ತಿ ಪಾಠ ಕೇಳಬೇಕು, ಇಲ್ಲವೇ ಅವರಿವರ ಮನೆ ಮೇಲೆ ಹತ್ತಬೇಕು. ಎಷ್ಟು ದಿನ ಅಂತ ಹೀಗೆ ಮಾಡುವುದು?

ಆನ್​ಲೈನ್ ಶಿಕ್ಷಣದ ಸಮಸ್ಯೆಗಳು

ಈ ಕಾರಣದಿಂದಲೇ ಸಾಕಷ್ಟು ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರತಿಭೆಗಳ ಕಲಿಕಾ ಸಾಮರ್ಥ್ಯ ಮೇಲೆ ಪೆಟ್ಟು ಬೀಳುತ್ತಿದೆ. ಆನ್​ಲೈನ್​ನಲ್ಲಿ ನೀಡುವ ಪಾಠ ಅಷ್ಟಾಗಿ ಅರ್ಥವಾಗುವುದಿಲ್ಲ, ಇಲ್ಲಿ ನಮ್ಮ ಡೌಟ್​ಗಳನ್ನು​ ಬಗೆಹರಿಸಿಕೊಳ್ಳುವುದು ಆಗದು. ಪದೇ ಪದೆ ಶಿಕ್ಷಕ ಅಥವಾ ಶಿಕ್ಷಕಿಯರಿಗೆ ಈ ಬಗ್ಗೆ ಕರೆ ಮಾಡಿ ಕೇಳಬೇಕಾಗುತ್ತದೆ. ಆದರೆ, ಇದು ಅಷ್ಟು ಸಮಂಜಸವಲ್ಲ. ಆದ್ದರಿಂದ ಆದಷ್ಟು ಬೇಗನೇ ಸರ್ಕಾರ ಶಾಲಾ‌‌-ಕಾಲೇಜುಗಳನ್ನು ತೆರೆಯಬೇಕು, ಇದಕ್ಕೊಂದು ಮುಕ್ತಿ ನೀಡಬೇಕು ಎನ್ನುತ್ತಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು.

ಆನ್​ಲೈನ್ ಶಿಕ್ಷಣದ ಸಮಸ್ಯೆಗಳು

ABOUT THE AUTHOR

...view details