ಚಿತ್ರದುರ್ಗ: ಜಿಲ್ಲೆಯಲ್ಲೀಗ ಕೊರೊನಾ ರಣಕೇಕೆ ಹೆಚ್ಚಾಗುತ್ತಿದೆ. ಈ ಮಹಾಮಾರಿ ಹಾವಳಿ ಬಿಸಿ ಸಾಕಷ್ಟು ರೈತರಿಗೆ ತಟ್ಟಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಹೈರಾಣಾಗಿದ್ದಾರೆ. ಆದರೆ ನಿವೃತ್ತ ಅಧಿಕಾರಿಯೊಬ್ಬರು ಕೊರೊನಾ ಹಾವಳಿ ನಡುವೆವೂ ಜೇನು ಕೃಷಿ ಕೈಗೊಂಡು ಯಶಸ್ವಿಯಾಗಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಜೇನು ಕೃಷಿಯಲ್ಲಿ ಯಶಸ್ವಿಯಾದ ನಿವೃತ್ತ ಸರ್ಕಾರಿ ನೌಕರ ಕೃಷಿ ಇಲಾಖೆಯ ನಿವೃತ ಉಪ ನಿರ್ದೇಶಕರಾಗಿರುವ ಶಾಂತವೀರಯ್ಯ, ನಿವೃತ್ತಿ ಹೊಂದಿದ ಬಳಿಕ ಸುಮ್ಮನೆ ಕುಳಿತುಕೊಳ್ಳದೇ ಜೇನು ಸಾಕಾಣಿಕೆಗೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದೊಡ್ಡ ಮೇಟಿಕುರ್ಕಿಯಲ್ಲಿ 5 ಎಕರೆ ಫಾರ್ಮ್ನಲ್ಲಿ ಸದ್ದಿಲ್ಲದೆ ಜೇನು ಸಾಕಾಣಿಕೆಗೆ ಕೈ ಹಾಕಿದ್ದಾರೆ.
ಬರಪೀಡಿತ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಜೇನು ಸಾಕಾಣಿಕೆ ಅತ್ಯಂತ ವಿರಳವಾಗಿದ್ದರು ಕೂಡ ಶಾಂತವೀರಯ್ಯ ಸುಮಾರು 500 ಹೆಚ್ಚು ಜೇನು ಗೂಡುಗಳಲ್ಲಿ ಜೇನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಇತರೆ ರೈತರಿಗೂ ಕೂಡ ಜೇನು ಸಾಕಾಣಿಕೆ ಬಗ್ಗೆ ಹೇಳಿ ಕೊಡುತ್ತಿದ್ದಾರಂತೆ. ಕೊರೊನಾ ನಡುವೆ ಇತರ ಬೆಳೆಗಳನ್ನು ಬೆಳೆದು ಬೆಲೆ ಇಲ್ಲದೆ ಹೈರಾಣಾಗಿದ್ದ ರೈತರು ಜೇನು ಖರೀದಿ ಮಾಡಿ ಸಾಕಷ್ಟು ಜೇನು ಸಾಕಾಣಿಕೆಗೆ ಮುಂದಾಗಿದ್ದರಂತೆ.
ಈಗಾಗಲೇ 500ಕ್ಕೂ ಹೆಚ್ಚು ಗೂಡುಗಳಲ್ಲಿ ಜೇನು ಸಾಕಾಣಿಕೆಗೆ ಮಾಡುತ್ತಿರುವ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೇಟಿಕುರ್ಕಿ ಫಾರ್ಮ್ವೊಂದರಲ್ಲಿ ಜೇನು ಬೆಳೆದಿರುವ ಶಾಂತವೀರಯ್ಯ 500 ಗೂಡುಗಳಲ್ಲಿ ರಾಣಿಜೇನು ನೊಣವನ್ನು ಬಿಡುವ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ಈ ಜೇನು ಸಾಕಾಣಿಕೆಗೆ ಪ್ರಧಾನ ಮಂತ್ರಿಯವರು 500 ಕೋಟಿ ಹಣ ಬಿಡುಗಡೆಗೊಳಿಸಿ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಶಾಂತವೀರಯ್ಯ ಸಂತಸ ವ್ಯಕ್ತಪಡಿಸಿದರು.