ಕರ್ನಾಟಕ

karnataka

ETV Bharat / state

ಜನರಿಗೆ ತಪ್ಪು ಸಂದೇಶ ನೀಡಬೇಡಿ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ - ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ ಸುದ್ದಿಗೋಷ್ಟಿ

ಭೋವಿ, ಕೊರಚ, ಕೊರಮ, ಲಂಬಾಣಿ, ಸಮುದಾಯಗಳ ಮೀಸಲಾತಿ ಕುರಿತ ಗೊಂದಲಗಳನ್ನು ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ನ್ಯಾಷನಲ್ ಕಮಿಷನ್ ಆಫ್ ಶೆಡ್ಯುಲ್ ಕ್ಯಾಸ್ಟ್​ಗೆ​ ನೀಡಿದ ಸೂಚನೆ ನೀಡಿದೆ. ಈ ಕುರಿತು ಕೆಲವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾ‌ಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

Reservations have not been canceled
ಸುಳ್ಳು ಮಾಹಿತಿ ನೀಡಿದಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ

By

Published : Jun 9, 2020, 1:05 PM IST

ಚಿತ್ರದುರ್ಗ : ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಲಾಗಿದೆ ಎಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾ‌ಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ನಗರದ ಭೋವಿ ಮಠದಲ್ಲಿ ಮಾತನಾಡಿದ ಶ್ರೀ, ಭೋವಿ, ಕೊರಚ, ಕೊರಮ, ಲಂಬಾಣಿ, ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂದು ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಈ ಸಂಬಂಧ ಕೆಲವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನ್ಯಾಯಾಲಯ, ಪ್ರಕರಣವನ್ನು ಕರ್ನಾಟಕ ರಾಜ್ಯ ನ್ಯಾಷನಲ್ ಕಮಿಷನ್ ಆಫ್ ಶೆಡ್ಯುಲ್ ಕ್ಯಾಸ್ಟ್​ಗೆ ಹಸ್ತಾಂತರಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಇದನ್ನೇ ಕೆಲವರು ಮೀಸಲು ರದ್ದುಗೊಳಿಸಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಜನರಿಗೆ ತಪ್ಪು ಮಾಹಿತಿ ನೀಡದಂತೆಯೂ ಇದೇ ವೇಳೆ ಸ್ವಾಮೀಜಿ ಮನವಿ ಮಾಡಿಕೊಂಡರು.

For All Latest Updates

ABOUT THE AUTHOR

...view details