ಕರ್ನಾಟಕ

karnataka

ETV Bharat / state

257 ಕೊರೊನಾ ಶಂಕಿತರ ವರದಿ ನೆಗೆಟಿವ್: ನಿಟ್ಟುಸಿರು ಬಿಟ್ಟ ಕೋಟೆ ನಾಡಿನ ಜನತೆ! - ಒಟ್ಟು 317 ಶಂಕಿತರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ

ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಸಂಬಂಧಿಸಿದಂತೆ ಒಟ್ಟು 317 ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 257 ಜನರ ವರದಿ ನೆಗೆಟಿವ್​ ಬಂದಿವೆ.

Report of 257 people in Chitradurga is negative
ಚಿತ್ರದುರ್ಗದಲ್ಲಿ 257 ಜನರ ವರದಿ ನೆಗೆಟಿವ್​

By

Published : Apr 17, 2020, 3:35 PM IST

ಚಿತ್ರದುರ್ಗ: ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ, ಜಿಲ್ಲೆಯಲ್ಲಿ ಇದುವರೆಗೂ 317 ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ ಈವರೆಗೆ 257 ಜನರ ವರದಿ ನೆಗೆಟಿವ್​​ ಎಂದು ಬಂದಿವೆ.

42 ಜನರ ಪರೀಕ್ಷಾ ವರದಿ ಬರುವುದು ಬಾಕಿ ಇದ್ದು, ಒಟ್ಟು 18 ಜನರ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈವರೆಗೆ ಒಟ್ಟು 317 ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 257 ಜನರ ವರದಿ ನೆಗೆಟಿವ್​ ಬಂದಿದೆ.

ಇದುವರೆಗೂ ಜಿಲ್ಲೆಯ ಭೀಮಸಮುದ್ರದಲ್ಲಿ ವರದಿಯಾಗಿದ್ದ 1 ಕೋವಿಡ್-19 ಪ್ರಕರಣ (ವರ್ಗಾವಣೆ ಮಾಡಲಾಗಿದೆ) ಹೊರತುಪಡಿಸಿ, ಈವರೆಗೆ ಯಾವುದೇ ಪಾಸಿಟಿವ್​ ಪ್ರಕರಣ ವರದಿಯಾಗಿಲ್ಲ. ಏರ್​ಪೋರ್ಟ್​ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ 117 ಜನರ ಬಗ್ಗೆ ಮಾಹಿತಿ ಪಡೆಯಲಾಗಿತ್ತು.

ಜಿಲ್ಲೆಯಲ್ಲಿ ರ್ಯಾಪಿಡ್ ರೆಸ್ಕ್ಯೂ ತಂಡದವರು ವಿದೇಶದಿಂದ ಬಂದಂತಹ ಅಥವಾ ಸಂಪರ್ಕ ಇರುವಂತಹ ಒಟ್ಟು 212 ಜನರನ್ನು ಗುರುತಿಸಿದ್ದು, ನಿಗಾದಲ್ಲಿ ಇರಿಸಿದ್ದರು. ಇಂತವರಲ್ಲಿ ಈಗಾಗಲೇ 310 ಜನರು 14 ದಿನಗಳ ಹಾಗೂ 249 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಸದ್ಯ ವಿದೇಶ ಪ್ರಯಾಣ ಹಾಗೂ ಇವರ ಸಂಪರ್ಕ ಹಿನ್ನೆಲೆ ಹೊಂದಿದ್ದವರ ಪೈಕಿ ಈಗ ಯಾರನ್ನೂ ಹೋಂ ಕ್ವಾರಂಟೈನ್ ನಿಗಾನಲ್ಲಿ ಇರಿಸಲಾಗಿಲ್ಲ.

ABOUT THE AUTHOR

...view details