ಚಿತ್ರದುರ್ಗ:ಎರಡು ದಿನದ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಚಳ್ಳಕೆರೆ ತಾಲೂಕಿನ ಚಿಕ್ಕ ಮದುರೆ ಕೆರೆ ಕೋಡಿ ಬಿದ್ದಿದೆ.
ಜಿಲ್ಲಾದ್ಯಂತ ಸುರಿದ 101.6 ಮಿ.ಮೀ. ಮಳೆಗೆ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿದೆ. ಇದರಿಂದ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ರೈತರು ಕೂಡ ಉತ್ತಮ ಬೆಳೆ ಬೆಳೆಯುವ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲೆಯ ಹಲವು ಕೆರೆಗಳು ಮಳೆಗೆ ಭರ್ತಿಯಾಗಿ ಕೋಡಿ ಬಿದ್ದಿವೆ.