ಚಿತ್ರದುರ್ಗ :ಉಚಿತವಾಗಿ ಪಡಿತರ ನೀಡಬೇಕೆಂದು ಸರ್ಕಾರ ಆದೇಶಿಸಿದ್ದರೂ ಕೂಡಾ ಕಾನೂನು ಉಲ್ಲಂಘನೆ ಮಾಡಿದ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಕೆಲ ಪಡಿತರ ಅಂಗಡಿಗಳಲ್ಲಿ ಇಪ್ಪತ್ತು ರೂಪಾಯಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಅಂಗಡಿಗಳ ಮೇಲೆ ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಕೆಲವರ ಲೈಸೆನ್ಸ್ ರದ್ದು ಮಾಡಿದ್ದಾರೆ.
ಸರ್ಕಾರದ ಆದೇಶದಕ್ಕೂ ಡೋಂಟ್‌ಕೇರ್.. ಅಧಿಕಾರಿಗಳು ದಾಳಿ ನಡೆಸಿದ್ಮೇಲೆ ಬುದ್ಧಿ ಬಂತು..
ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈಗ ಎಲ್ಲಾ ಅಂಗಡಿಗಳ ಮಾಲೀಕರು ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದ್ದಾರೆ.
ಚಿತ್ರದುರ್ಗ ನಗರದ ಗಾಂಧಿನಗರ, ಹಿರಿಯೂರು ತಾಲೂಕಿನ ಬಬ್ಬೂರು, ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಪರವಾನಗಿ ರದ್ದಾಗಿದೆ. ಈ ವಿಚಾರ ಗೊತ್ತಾದ ಮೇಲೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈಗ ಎಲ್ಲಾ ಅಂಗಡಿಗಳ ಮಾಲೀಕರು ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 580 ನ್ಯಾಯಬೆಲೆ ಅಂಗಡಿಗಳಿವೆ. 15,146 ಮೆಟ್ರಿಕ್ ಟನ್ ಅಕ್ಕಿ, 14,070 ಮೆಟ್ರಿಕ್ ಟನ್ ಗೋಧಿ ವಿತರಿಸಲಾಗುತ್ತಿದೆ. ಆಹಾರ ಇಲಾಖೆಗೆ ನೂತನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದ ಪ್ರತಿಯೊಬ್ಬರಿಗೂ ತಾತ್ಕಾಲಿಕ ಪಡಿತರ ಚೀಟಿ ನೀಡಿ ಅಕ್ಕಿ, ಗೋಧಿ ವಿತರಣೆ ಮಾಡಲಾಗುತ್ತಿದೆ.