ಚಿತ್ರದುರ್ಗ: ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ರಘುಆಚಾರ್ ಅವರು ಕೊರೊನಾ ವೈರಸ್ನಿಂದ ಗೆದ್ದುಬರಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ಚಿತ್ರದುರ್ಗ: ರಘು ಆಚಾರ್ ಕೊರೊನಾ ಮುಕ್ತರಾಗಲೆಂದು ದೇವರೆಡೆ ಹೋದ ಅಭಿಮಾನಿ ಬಳಗ... - Raghu Achar fans worshiped in chitradurga
ಕೊರೊನಾದಿಂದ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಬೇಗ ಗುಣಮುಖರಾಗಬೇಕೆಂದು ಅವರ ಅಭಿಮಾನಿ ಬಳಗ ಚಿತ್ರದುರ್ಗದ ರಾಘವೇಂದ್ರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಘು ಆಚಾರ್ ಕೊರೊನಾ ಮುಕ್ತರಾಗಲೆಂದು ದೇವರೆಡೆ ಹೋದ ಅಭಿಮಾನಿ ಬಳಗ
ರಘು ಆಚಾರ್ ಬೇಗ ಗುಣಮುಖರಾಗಬೇಕೆಂದು ಅವರ ಅಭಿಮಾನಿ ಬಳಗ ನಗರದ ಜೆಸಿಆರ್ ಬಡಾವಣೆಯಲ್ಲಿಯಲ್ಲಿರುವ ರಾಘವೇಂದ್ರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ಕಂಡು ಬಂದಿದ್ದರಿಂದ ಶಾಸಕ ರಘು ಆಚಾರ್ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ರೋಗ ಗುಣಲಕ್ಷಣಗಳು ಕಂಡು ಬಾರದೆ ಇದ್ದರೂ ಕೂಡ ಈಗಾಗಲೇ ಇಡೀ ಕುಟುಂಬವನ್ನು ಹೋಮ್ ಐಸೋಲೇಷನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದೆ. ಆದ್ದರಿಂದ ಅವರ ಅಭಿಮಾನಿ ಬಳಗದವರು ಇಡೀ ಕುಟುಂಬ ಕೊರೊನಾ ಜಯಿಸಿ ಬರುವಂತೆ ಆಶಿಸಿದರು.