ಕರ್ನಾಟಕ

karnataka

ETV Bharat / state

ಚಿತ್ರದುರ್ಗ‌‌: ಇಂದು ಬೆಳೆ ಹಾನಿ ಸಮೀಕ್ಷೆ ನಡೆಸಲಿರುವ ಆರ್.ಅಶೋಕ್​

ಚಿತ್ರದುರ್ಗ‌‌ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಕಡಲೆ ಬೆಳೆ ಹಾನಿಯಾಗಿದ್ದು, ಈ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್​ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.

ಆರ್.ಅಶೋಕ್​
ಆರ್.ಅಶೋಕ್​

By

Published : Jan 11, 2021, 8:41 AM IST

ಚಿತ್ರದುರ್ಗ: ಕಂದಾಯ ಸಚಿವ ಆರ್.ಅಶೋಕ್​ ಇಂದು ಕೋಟೆನಾಡು ಚಿತ್ರದುರ್ಗ‌‌ ಜಿಲ್ಲೆಗೆ ಆಗಮಿಸಿ ಬೆಳೆ ಹಾನಿ ಸಮೀಕ್ಷೆ ನಡೆಸಲಿದ್ದಾರೆ‌.

ಮಳೆಯಿಂದಾಗಿ ಕಡಲೆ ಬೆಳೆ ಹಾನಿ

ಇಂದು ಬೆಳಗ್ಗೆ 11:30 ಕ್ಕೆ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಲಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಕಡಲೆ ಬೆಳೆ ಹಾನಿಯಾಗಿದ್ದು, ಈ ಹಿನ್ನೆಲೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಐಮಂಗಲ ಗ್ರಾಮದ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಪ್ರವಾಸ ಕಾರ್ಯಕ್ರಮದ ಕುರಿತು ಮಾಹಿತಿ

ಇನ್ನು ರೈತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಇಂದು ಮಧ್ಯಾಹ್ನ 02 ಗಂಟೆಗೆ ಜಿಲ್ಲಾ ಪಂಚಾಯತ್​ ಸಭಾ ಭವನದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲೆಯಲ್ಲಿ ಮಳೆ ಹಾನಿಯಿಂದಾದ ಆವಾಂತರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ‌.

ABOUT THE AUTHOR

...view details