ಕರ್ನಾಟಕ

karnataka

ETV Bharat / state

ತ್ರೈಮಾಸಿಕ ಕೆಡಿಪಿ ಸಭೆ.. ಸಾಮಾಜಿಕ ಅಂತರ‌ ಮರೆತ ಶಾಸಕರು,ಅಧಿಕಾರಿಗಳು.. - ತ್ರೈಮಾಸಿಕ ಕೆಡಿಪಿ ಸಭೆ

ಜನಸಾಮಾನ್ಯರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳು ತಾವೇ ಸ್ವತಃ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಚಿತ್ರದುರ್ಗ ತಾಲೂಕು ಪಂಚಾಯತ್‌ನಲ್ಲಿ ಕಂಡು ಬಂತು.

Quarterly KDP meeting
ತ್ರೈಮಾಸಿಕ ಕೆಡಿಪಿ ಸಭೆ

By

Published : Jun 8, 2020, 5:32 PM IST

ಚಿತ್ರದುರ್ಗ :ಜನಸಾಮಾನ್ಯರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕರು ಸೇರಿದಂತೆ ಸಾಕಷ್ಟು ಅಧಿಕಾರಿಗಳು ಸರ್ಕಾರದ ನಿಯಮ ಪಾಲಿಸದೆ ಸಭೆಯಲ್ಲಿ ಪಾಲ್ಗೊಂಡು ಪ್ರಗತಿ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಕೆಲವರು ಮಾಸ್ಕ್ ಇದ್ರೂ ಮುಖಕ್ಕೆ ಹಾಕದೆ ಉದ್ಧಟತನ ಮೆರೆಯುವ ಮೂಲಕ ಸಭೆಯಲ್ಲಿ ಭಾಗಿಯಾದ್ರು.

ಜನಸಾಮಾನ್ಯರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳು ತಾವೇ ಸ್ವತಃ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಚಿತ್ರದುರ್ಗ ತಾಲೂಕು ಪಂಚಾಯತ್‌ನಲ್ಲಿ ಕಂಡು ಬಂತು. ಸಭೆಯಲ್ಲಿ ಪಡಿತರ ಅಂಗಡಿಗಳಲ್ಲಿ ಉಚಿತ ರೇಷನ್ ನೀಡುವ ಬದಲು 10 ರೂ. ಪಡೆಯುವ ಮೂಲಕ ಪಡಿತರ ನೀಡುತ್ತಿದ್ದಾರೆ ಎಂದು ಶಾಸಕರು ಹಾಗೂ ಕೆಲ ಜಿಪಂ ಸದಸ್ಯರು ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details