ಕರ್ನಾಟಕ

karnataka

ETV Bharat / state

ಸಂವಿಧಾನ ಉಳಿಸುವ ಮೂಲಕ ಮೀಸಲಾತಿ ರಕ್ಷಿಸುವಂತೆ ಪ್ರತಿಭಟನೆ - disrtict collecter vinoth priya

ಸಂವಿಧಾನ ಉಳಿಸುವ ಮೂಲಕ ಮೀಸಲಾತಿ ರಕ್ಷಿಸುವಂತೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

protest
ಮೀಸಲಾತಿ ರಕ್ಷಿಸುವಂತೆ ಪ್ರತಿಭಟನೆ

By

Published : Mar 3, 2020, 9:40 PM IST

Updated : Mar 3, 2020, 10:20 PM IST

ಚಿತ್ರದುರ್ಗ: ಸಂವಿಧಾನ ಉಳಿಸುವ ಮೂಲಕ ಮೀಸಲಾತಿ ರಕ್ಷಿಸುವಂತೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಿ.ಸಿ ವೃತ್ತದಲ್ಲಿ ಜಮಾಯಿಸಿದ ಡಿಎಸ್ಎಸ್ ಪದಾಧಿಕಾರಿಗಳು ಅಪಾಯ ಎದುರಿಸುತ್ತಿರುವ ಸಂವಿಧಾನ ಹಾಗೂ ಮೀಸಲಾತಿ ಕಾಯ್ದೆಯನ್ನು ರಕ್ಷಿಸುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದರು. ತಮಿಳುನಾಡು ಮಾದರಿಯಲ್ಲಿ ಶೇ70% ರಷ್ಟು ಜನಸಂಖ್ಯೆಗನುಗುಣವಾಗಿ ಶೇ30% ರಷ್ಟು ಮೀಸಲಾತಿ ನೀಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರತಿಭಟನೆಯ ಮೂಲಕ ಮನವಿ ಮಾಡಿದರು.

ಸಂವಿಧಾನ ಉಳಿಸುವ ಮೂಲಕ ಮೀಸಲಾತಿ ರಕ್ಷಿಸುವಂತೆ ಪ್ರತಿಭಟನೆ

ಮೀಸಲಾತಿ ಪಡೆದುಕೊಳ್ಳುವ ಸಲುವಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿರುವವರ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ವಿನೋತ್ ಪ್ರಿಯಾರವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Last Updated : Mar 3, 2020, 10:20 PM IST

ABOUT THE AUTHOR

...view details