ಕರ್ನಾಟಕ

karnataka

ETV Bharat / state

ದುಡಿಸಿಕೊಂಡು ಕೂಲಿ ನೀಡದ ಆರೋಪ: ಮೊಳಕಾಲ್ಮೂರು ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ - ಮೊಳಕಾಲ್ಮೂರು ಗೋಶಾಲೆ ಕಾರ್ಮಿಕರು

ಮೊಳಕಾಲ್ಮೂರು ತಾಲೂಕು ಆಡಳಿತ ಗೋಶಾಲೆಗಳಲ್ಲಿ ಕೆಲಸ ಮಾಡಿದ್ದ ಕೂಲಿಗಾರರಿಗೆ ಕೂಲಿ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟಿಸಿದರು.

protest in molakalmuru
ದುಡಿಸಿಕೊಂಡು ಕೂಲಿ ನೀಡದ ಮೊಳಕಾಲ್ಮೂರು ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ

By

Published : Nov 3, 2020, 3:18 PM IST

ಚಿತ್ರದುರ್ಗ: ಗೋಶಾಲೆಗಳಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಮೊಳಕಾಲ್ಮೂರು ತಾಲೂಕು ಆಡಳಿತ ಕೂಲಿ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ದುಡಿಸಿಕೊಂಡು ಕೂಲಿ ನೀಡದ ಆರೋಪ: ಮೊಳಕಾಲ್ಮೂರು ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಹಾಗೂ ಮುತ್ತಿಗಾರನ ಹಳ್ಳಿಯಲ್ಲಿರುವ ಗೋಶಾಲೆಗಳಲ್ಲಿ ಸುಮಾರು ಮೂವತ್ತು ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ಆದ್ರೆ ಕೂಲಿ ನೀಡಿಲ್ಲ. ಆರು ತಿಂಗಳ ಕಾಲ ಕೂಲಿ ಇಲ್ಲದೆ ಜೀವನ ನಡೆಸಲು ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಕದ ತಟ್ಟಿದ್ದಾರೆ.

ಆರು ತಿಂಗಳ ಕಾಲ ದುಡಿಸಿಕೊಂಡ ತಾಲೂಕು ಆಡಳಿತಕ್ಕೆ ಕೂಲಿ ನೀಡುವಂತೆ ಕಾಂರ್ಮಿಕರು ಜಿಲ್ಲಾಧಿಕಾರಿ ಕಚೇರಿ ಬಳಿ ಮೌನ ಪ್ರತಿಭಟನೆ ನಡೆಸಿದರು. ಸಿಪಿಐ ಪಕ್ಷದಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕೂಲಿ ಹಣವನ್ನು ತಕ್ಷಣ ನೀಡಿವಂತೆ ಪಟ್ಟು ಹಿಡಿದರು.

ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸಂಗಪ್ಪ ಭೇಡಿ ನೀಡಿ ಸಮಸ್ಯೆ ಆಲಿಸುವ ಮುಖೇನ ಮನವಿ ಪಡೆದು ಮೊಳಕಾಲ್ಮೂರು ತಾಪಂ ಇಒಗೆ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details