ಚಿತ್ರದುರ್ಗ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ಮುಂದುವರೆದಿದೆ. ಚಿತ್ರದುರ್ಗ ನಗರದ ವಿವಿಧ ಮಸೀದಿಗಳ ಬಳಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್ಆರ್ಸಿ, ಎನ್‌ಪಿಆರ್ ಕಾಯ್ದೆಗಳ ವಿರುದ್ಧ ಅಲ್ಪಸಂಖ್ಯಾತರು ಮೌನ ಧರಣಿ ನಡೆಸಿದರು.
ಚಿತ್ರದುರ್ಗದಲ್ಲಿ ಮುಂದುವರೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ - ತ್ರಿವರ್ಣ ಧ್ವಜ ಹಿಡಿದು ಸಿಎಎ, ಎನ್ ಆರ್ ಸಿ, ಎನ್‌ಪಿಆರ್ ವಿರುದ್ಧ ಧರಣಿ
ತ್ರಿವರ್ಣ ಧ್ವಜ ಹಿಡಿದು ಸಿಎಎ,ಎನ್ಆರ್ಸಿ ಹಾಗೂ ಎನ್‌ಪಿಆರ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
protest in chithradurga
ಮಧ್ಯಾಹ್ನದ ನಮಾಜು (ಪ್ರಾರ್ಥನೆ) ಸಲ್ಲಿಸಿದ ಬಳಿಕ ಮಸೀದಿ ಬಳಿ ಮೌನ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನೆ ಮಾಡಿದರು. ಚಿತ್ರದುರ್ಗದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್ ಕೆ ಸರ್ದಾರ್ ನೇತೃತ್ವದಲ್ಲಿ ಈ ಧರಣಿ ನಡೆಸಲಾಗಿದೆ. ನಗರದ ವಿವಿಧ ಮಸೀದಿಗಳ ಬಳಿ ಮೌನ ಪ್ರತಿಭಟನೆ ನಡೆಸಿ ಕಾಯ್ದೆಗಳನ್ನು ರದ್ದು ಮಾಡುವಂತೆ ಪ್ರಧಾನಿ ಮೋದಿಯವರಿಗೆ ಒತ್ತಾಯಿಸಲಾಯಿತು.
ತ್ರಿವರ್ಣ ಧ್ವಜ ಹಿಡಿದು ಸಿಎಎ,ಎನ್ಆರ್ಸಿ ಹಾಗೂ ಎನ್‌ಪಿಆರ್ ವಿರುದ್ಧ ಧರಣಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.