ಕರ್ನಾಟಕ

karnataka

ETV Bharat / state

ಪಂಡ್ರಹಳ್ಳಿಯಲ್ಲಿ ಕಳಪೆ ಕಾಮಗಾರಿ ಖಂಡಿಸಿ ಜಿ.ಪಂ. ಎದುರು ಪ್ರತಿಭಟನೆ - protest against worst work progress in padrahalli

ಚಿತ್ರದುರ್ಗದ ಗ್ರಾಮವೊಂದರಲ್ಲಿ ಕಳಪೆ ಕಾಮಗಾರಿ ನಡೆಸಿರುವುದಾಗಿ ಗ್ರಾಮಸ್ಥರು ಆರೋಪಿಸಿ ಜಿಲ್ಲಾ ಪಂಚಾಯತ್​ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

ಶಾಂತಿಯುತ ಪ್ರತಿಭಟನೆ
ಶಾಂತಿಯುತ ಪ್ರತಿಭಟನೆ

By

Published : Jan 27, 2020, 9:06 PM IST

ಚಿತ್ರದುರ್ಗ:ತಾಲೂಕಿನ ಗೊಡಬನಾಳ್ ಗ್ರಾ.ಪಂ. ವ್ಯಾಪ್ತಿಗೆ ಬರುವ ಪಂಡ್ರಹಳ್ಳಿಯಲ್ಲಿ, ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದ್ದು, ಜಿ.ಪಂ. ಎದುರು ಗ್ರಾಮಸ್ಥರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಜಿಲ್ಲಾ.ಪಂ ಎದುರು ಗ್ರಾಮಸ್ಥರು ಶಾಂತಿಯುತ ಪ್ರತಿಭಟನೆ

ಗ್ರಾಮದಲ್ಲಿ ನಿರ್ಮಾಣವಾಗಿರುವ ರಸ್ತೆ, ಚರಂಡಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಕೆಲಸ ಮಾಡಿಸಿದ ಕೆಲ ದಿನಗಳಲ್ಲಿ ಅವನತಿಯತ್ತ ಸಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದರು. ಕಳಪೆ ಕಾಮಗಾರಿ ಬಗ್ಗೆ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿಡಿಒ ಬಳಿ ಕೇಳಿದರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಜಿ.ಪಂ.ಗೆ ಭೇಟಿ ನೀಡಿ ಸಿಇಒಗೆ ಮನವಿ ಸಲ್ಲಿಸಿದರು. ಇದರ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಇದರ‌ ಬಗ್ಗೆ ಗಮನ ಹರಿಸುವಂತೆ ಸಿಇಒಗೆ ಸೂಚಿಸಿದರು.

ABOUT THE AUTHOR

...view details