ಚಿತ್ರದುರ್ಗ: ಕೋಳಿ ಸಾಕಣೆಯಲ್ಲಿ ಖಾಸಗಿ ಕಂಪನಿಗಳ ಹಸ್ತಕ್ಷೇಪಕ್ಕೆ ರೈತರು ಹಾಗೂ ಕೋಳಿ ಸಾಗಾಣಿಕೆದಾರರು, ಮತ್ತು ಫೌಲ್ಟ್ರಿ ಫಾರಂ ಮಾಲೀಕರು ಗರಂ ಆಗಿದ್ದಾರೆ.
ಚಿತ್ರದುರ್ಗದಲ್ಲಿ ಖಾಸಗಿ ಕಂಪನಿಗಳ ಹಸ್ತಕ್ಷೇಪ: ನಲುಗಿದ ಕೋಳಿ ಸಾಕಣೆದಾರರು - price of chicken
ಕೊರೊನಾ ನಡುವೆ ಕೋಳಿ ಸಾಕಣಿದಾರರು ಖಾಸಗಿ ಕಂಪನಿಗಳ ಹಸ್ತಕ್ಷೇಪದಿಂದ ನಲಗುತ್ತಿದ್ದಾರೆ ಎಂಬ ಆರೋಪ ಚಿತ್ರದುರ್ಗದಲ್ಲಿ ಕೇಳಿ ಬಂದಿದೆ.
ಕೋಳಿ ಸಾಕಣೆಕೆದಾರರಿಗೆ ಖಾಸಗಿ ಕಂಪನಿಯೊಂದು ನೀಡುತ್ತಿದ್ದ ಕೋಳಿ ಮರಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕೋಳಿ ಮರಿಗೆ 15 ರಿಂದ 16 ರೂ ಇದ್ದ ದರವನ್ನು 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ.
ಇನ್ನು ಖಾಸಗಿ ಕಂಪನಿಯವರು 50 ರೂಪಾಯಿಗೆ ನೀಡುವ ಕೋಳಿ ಮರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಬಳಿಕ ಅದೇ ಕಂಪನಿಯವರು ಕೋಳಿಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವುದು ಕೋಳಿ ಸಾಕಣೆದಾರರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇನ್ನು ಕೋಳಿ ಮರಿಗಳನ್ನು ನೀಡುತ್ತೇವೆ ಎಂದು ಮಾರುಕಟ್ಟೆಗೆ ಬಂದಂತಹ ಕಂಪನಿ ಇದೀಗ ಕೋಳಿ ಮಾಂಸ ಮಾರಾಟ ದಂಧೆಯಲ್ಲಿ ಇಡೀ ಮಾರುಕಟ್ಟೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ ಎಂದು ಕೋಳಿ ಸಾಕಣೆದಾರರ ಸಂಘದ ಅಧ್ಯಕ್ಷ ದೇವರಾಜ್ ಕಿಡಿ ಕಾರಿದ್ದಾರೆ.